10 ಕೋಟಿಗೆ ‘ವಿಕ್ರಾಂತ್ ರೋಣ’ ಸೇಲ್
ನಟ ಸುದೀಪ್ ಅಭಿನಯದ ವಿಕ್ರಾಂತ್ ರೋಣ ವಿದೇಶಿ ಮಾರುಕಟ್ಟೆಯಲ್ಲಿ ಆಗಲೇ ಸದ್ದು ಮಾಡಲು ಆರಂಭಿಸಿದೆ. ಸಿನಿಮಾ ಬಿಡುಗಡೆ ಆಗುವ ಮುನ್ನವೇ ಓವರ್ ಸೀಸ್‌ನಲ್ಲಿ ಈ ಚಿತ್ರದ ವಿತರಣೆ ಹಕ್ಕುಗಳು 10 ಕೋಟಿಗೆ ಮಾರಾಟಗೊಂಡಿವೆ. ಆ ಮೂಲಕ ಕನ್ನಡ ಚಿತ್ರವೊಂದು ಬಿಡುಗಡೆ ಆಗುವ ಮುನ್ನವೇ ವಿದೇಶಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟಗೊಂಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂಬುದು ಚಿತ್ರತಂಡದ ಉತ್ಸಾಹದ ಮಾತು. ವಿದೇಶದಲ್ಲಿ ಚಿತ್ರದ ಹಕ್ಕುಗಳನ್ನು ಒನ್ ಟ್ವೆಂಟಿ 8 ಮೀಡಿಯಾ ಹೆಸರಿನ ಸಂಸ್ಥೆ ತನ್ನದಾಗಿಸಿಕೊಂಡಿದೆ..3ಡಿ ತಂತ್ರಜ್ಞಾನದಲ್ಲಿ ಜುಲೈ 28ರಂದು ದೇಶ- ವಿದೇಶಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಬ್ಯುಸಿನೆಸ್ ಮಾಡುತ್ತಿರೋದ್ರಿಂದ ನಿರ್ಮಾಪಕ ಜಾಕ್ ಮಂಜು ಸಂಭ್ರಮದಲ್ಲಿದ್ದಾರೆ.