ಡಿಸಿಎಂ ಡಿಕೆಶಿ ಭೇಟಿ‌ ಮಾಡಿದ ಸೋಂಪುರ ಗ್ರಾಮಸ್ಥರು

ಮಂಗಳವಾರ, 25 ಜುಲೈ 2023 (17:00 IST)
ನೈಸ್ ವಿಚಾರವಾಗಿ ಡಿಸಿಎಂ ಡಿ ಕೆ ಶಿವಕುಮಾರನ್ನ ಸೋಂಪುರ ಗ್ರಾಮಸ್ಥರು ಭೇಟಿ ಮಾಡಿದ್ದಾರೆ.ಡಿಕೆಶಿ ಭೇಟಿ ಬಳಿಕ ಬಿಜೆಪಿ ಮುಖಂಡ ರುದ್ರೇಶ್ ಸೋಂಪುರ ಗ್ರಾಮದ ಜಮೀನು ವಶ ಆಗಿ 20-25 ವರ್ಷ ಆಗಿದೆ.ನೈಸ್ ನಿಂದ ನಮಗೆ ನಿವೇಶನ ಹಂಚಿಕೆ ಆಗಿಲ್ಲ.ಡಿಸಿಎಂ ಅವ್ರನ್ನ ಭೇಟಿ ಮಾಡಿದ್ದೇವೆ.ರೈತರಿಗೆ ಅನುಕೂಲ ಮಾಡಿ, ನಿವೇಶನ ಕೊಡಲಿ.ನಮ್ಮ ಗ್ರಾಮಸ್ಥರು ಇನ್ನೂ ಪ್ರೊಟೆಸ್ಟ್ ಮಾಡಿಲ್ಲ.ರೈತರಿಗೆ ಅನ್ಯಾಯ ಕೆಲವರು ಅಂತಾ ಬರೀ ಬಿಲ್ಡಪ್ ಕೊಡ್ತಿದ್ದಾರೆ.ದಯಮಾಡಿ ನಮ್ಮ ಸೋಂಪುರ ಗ್ರಾಮಕ್ಕೆ ಬಂದು ರೈತರ ಕಷ್ಟ ನೋಡಿ.ನಿವೇಶನಗಳು ಸಿಗದೇ ತೊಂದರೆ ಆಗ್ತಿದೆ, ಪರಿಹಾರವೂ ಸಿಗ್ತಿಲ್ಲ‌ ಎಂದು ಡಿಕೆಶಿವಕುಮಾರ್ ಅವರಿಗೆ ಮನವಿ ಮಾಡಿದ್ದೇವೆ.ನಮ್ಮ ಮನವಿಗೆ ಡಿಸಿಎಂ ಅವರು ಸ್ಪಂದನೆ ಮಾಡಿದ್ದಾರೆ .ಅವರೇ ಸೋಂಪುರ ಗ್ರಾಮಕ್ಕೆ ಆ ಸರ್ಕಲ್ ಗೆ ಬರ್ತಿನಿ ಅಲ್ಲಿರುವ ಸಮಸ್ಯೆಗಳ ಕುರಿತು ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದ್ದಾರೆ.ನಮಗೊಂದು ಡಿಸಿಎಂ ಅವರು ಇವತ್ತು ಭರವಸೆ ಕೊಟ್ಟಿದ್ದಾರೆ ಎಂದು ಬಿಜೆಪಿ‌ ಮುಖಂಡ ರುದ್ರೇಶ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ