ಕಾರಿನ ಸನ್ ರೂಫ್ ನಲ್ಲಿ ನಿಂತಿದ್ದ ಬಾಲಕ, ಮುಂದೇನಾಯ್ತು ಭಯಾನಕ ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಇಂತಹದ್ದೊಂದು ಭಯಾನಕ ಘಟನೆ ನಡೆದಿದೆ. ಬಾಲಕನೊಬ್ಬ ಚಲಿಸುತ್ತಿದ್ದ ಕಾರಿನ ಸನ್ ರೂಫ್ ನಲ್ಲಿ ತಲೆ ಹೊರಗೆ ಹಾಕಿಕೊಂಡು ಹೋಗುತ್ತಿದ್ದ. ಒಂದು ಕಡೆ ಕಬ್ಬಿಣ ಕಮಾನು ಒಂದಿತ್ತು. ಇದಕ್ಕೆ ಬಾಲಕನ ತಲೆ ಹೊಡೆದಿದೆ.
ಪರಿಣಾಮ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು ಜೀವನ್ಮರಣದ ನಡುವೆ ಹೋರಾಡುವ ಪರಿಸ್ಥಿತಿಯಾಗಿದೆ. ಇದು ಈ ರೀತಿ ಸನ್ ರೂಫ್ ಕಾರಿನಲ್ಲಿ ಸ್ಟಂಟ್ ಮಾಡುವವರಿಗೆ ಒಂದು ಪಾಠವಾಗಬೇಕಾದ ಘಟನೆಯಾಗಿದೆ.
ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದಂತೇ ಸಂಚಾರಿ ಪೊಲೀಸರೂ ಅಲರ್ಟ್ ಆಗಿದ್ದಾರೆ. ಇದು ಸಂಚಾರೀ ನಿಯಮಗಳ ಉಲ್ಲಂಘನೆಯಾಗಿದ್ದು, ಮಕ್ಕಳು ಸೀಟ್ ಬೆಲ್ಟ್ ಧರಿಸಿ ಕಡ್ಡಾಯವಾಗಿ ಸೀಟ್ ನಲ್ಲಿ ಕೂರಬೇಕು. ಇದನ್ನು ತಪ್ಪಿದ್ದಕ್ಕೆ ದಂಡದ ಬರೆಯನ್ನೂ ಹಾಕಲಾಗಿದೆ.