ಸಾಹಸ ಸಿಂಹನ ಸ್ಮರಣೆ – ‘ಬೆಂಗಳೂರಲ್ಲಿ ವಿಷ್ಣು ಸ್ಮಾರಕ ನಿರ್ಮಾಣವಾಗಲೇಬೇಕು’
ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಂಸ್ಮರಣೆಯನ್ನು ಅಭಿಮಾನಿಗಳು ನೆರವೇರಿಸಿದರು.
ಬಳಗದ ಜಿಲ್ಲಾಧ್ಯಕ್ಷ ವಿಷ್ಣು ವಿಠಲ್ ಮಾತನಾಡಿ, ನಾಡಿನಾದ್ಯಂತ ವಿಷ್ಣುವರ್ಧನ್ ಅವರ 10ನೇ ಪುಣ್ಯ ಸ್ಮರಣೆ ಆಚರಿಸುತ್ತಿದ್ದು, ವಿಷ್ಣುವರ್ಧನ್ ಹೆಸರಿನಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಅವರ ಅಂತ್ಯಕ್ರಿಯೆ ನಡೆದಿತ್ತು. ಹೀಗಾಗಿ ಮೈಸೂರು ರೀತಿ ಬೆಂಗಳೂರಿನಲ್ಲೂ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸಿದರು.