ವಿಶ್ವನಾಥ್ಗೆ ಈಗ ಖರ್ಗೆಯೇ ಆಸರೆ!

ಮಂಗಳವಾರ, 6 ಡಿಸೆಂಬರ್ 2022 (06:50 IST)
ಮೈಸೂರು : ಬಿಜೆಪಿಯಲ್ಲಿದ್ದರೂ ಅಕ್ಷರಶಃ ವಿರೋಧ ಪಕ್ಷದ ನಾಯಕನಾಗಿರೋ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸದ್ದಿಲ್ಲದೆ ಮರಳಿ ಕಾಂಗ್ರೆಸ್ ಗೂಡಿಗೆ ಸೇರುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಶ್ವನಾಥ್ ಭೇಟಿ ಮಾಡಿರೋ ಹಿನ್ನೆಲೆಯಲ್ಲಿ ಮತ್ತೆ ವಿಶ್ವನಾಥ್ ಪಕ್ಷಾಂತರ ಮಾಡ್ತಾರಾ ಎಂಬ ಸುದ್ದಿ ದಟ್ಟವಾಗಿದೆ.

ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಮೂರು ವರ್ಷದ ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರಿ ಕಾಂಗ್ರೆಸ್ – ಜೆಡಿಎಸ್ ಸರ್ಕಾರ ಪತನವಾಗಲು ಪ್ರಮುಖ ಕಾರಣರಾಗಿದ್ದರು.

ಬಾಂಬೆ ಟೀಂಗೆ ಒಂದರ್ಥದಲ್ಲಿ ವಿಶ್ವನಾಥ್ ಅವರೇ ಕ್ಯಾಪ್ಟನ್. ಆದರೆ ಉಪಚುನಾವಣೆಯಲ್ಲಿ ಸೋತ ಬಳಿಕ ಅವರು ಕ್ಯಾಪ್ಟನ್ಶಿಪ್ ಕಳೆದುಕೊಂಡು ಇಡೀ ಬಾಂಬೆ ಟೀಂ ಪಾಲಿಗೆ ಅಪ್ರಸ್ತುತರೆನ್ನಿಸಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ