ಸಿದ್ದರಾಮಯ್ಯ ಆಶೀರ್ವಾದ ಇರೋವರೆಗೆ ಸರ್ಕಾರ ಭದ್ರ ಎಂದ ಸಿಎಂ

ಮಂಗಳವಾರ, 14 ಮೇ 2019 (13:33 IST)
ಕುಂದಗೋಳದಲ್ಲಿ ಪ್ರಚಾರ ಮಾಡಿದ ಸಿಎಂ ಎಚ್ ಡಿ ಕುಮಾರಸ್ವಾಮಿ, 'ಉಪಚುನಾವಣೆ ಯಾರು ನಿರೀಕ್ಷೆ ಮಾಡಿ ಬಂದಿರೋದಲ್ಲ. ಮೈತ್ರಿ ಸರ್ಕಾರದಲ್ಲಿ ಸಿ.ಎಸ್ ಶಿವಳ್ಳಿ ನನಗೆ ಆತ್ಮೀರಾಗಿದ್ದರು. ಬಡವರ ಪರ ಕೆಲಸ ಮಾಡೋ ಸಚಿವರಾಗಿದ್ದರು. ಅವರ ನಿಧನದ ಹಿಂದಿನ ದಿನ ನಾನು ಶಿವಳ್ಳಿ ಅವರನ್ನು ಭೇಟಿಯಾಗಿದ್ದೆ' ಎಂದರು. 

ತಂದೆ ಸಾವಿನ ನೋವಿನ ಸಂದರ್ಭದಲ್ಲಿ ಶಿವಳ್ಳಿ ಪುತ್ರಿ ಪರೀಕ್ಷೆ ಬರೆದ ವಿಚಾರದ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ. 'ಆ ಮಕ್ಕಳು ಶಿವಳ್ಳಿ ನೀಡಿದ ಆಸ್ತಿ ಎಂದು ಕುಸುಮಾ ಶಿವಳ್ಳಿಗೆ ಹೇಳಿದ್ದೇನೆ. ಸಿದ್ದರಾಮಯ್ಯ ಆಶೀರ್ವಾದ ಇರೋವರೆಗೆ ಸಮ್ಮಿಶ್ರ ಸರ್ಕಾರಕ್ಕೆ ಏನು ಆಗಲ್ಲ. ಜನರ ಆಶೀರ್ವಾದ ಇರೋವರಗೆ ಸಮ್ಮಿಶ್ರ ಸರ್ಕಾರ ಅಲುಗಾಡಿಸಲು ಸಾಧ್ಯವಿಲ್ಲ' ಎಂದು ಗುಡುಗಿದರು.

ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಧಾರವಾಡ ಜಿಲ್ಲೆಗೆ 290 ಕೋಟಿ ಸಿಕ್ಕಿದೆ. ಹೀಗಿದ್ದರೂ ಸಮ್ಮಿಶ್ರ ಸರ್ಕಾರ ಯಾಕೆ ಪತನ ಆಗ್ಬೇಕು? ಎಂದು ಪ್ರಶ್ನಿಸಿದ್ರು. ಬಡವರ ಪರವಾಗಿದ್ದ ಸಿ.ಎಸ್ ಶಿವಳ್ಳಿ ಅವರ ಪತ್ನಿ ಕುಸುಮಾ ಅವರನ್ನ ಯಾವುದೇ ಕಾರಣಕ್ಕೂ ಕೈ ಬಿಡಬೇಡಿ, ಅವರನ್ನ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ