ಕಾಂಗ್ರೆಸ್, ಬಿಜೆಪಿ ಶಾಸಕರ ಜಮೀನು ಪಹಣಿಯಲ್ಲೂ ವಕ್ಫ್ ಮೊಹರು: ಬುಡಕ್ಕೇ ಮುಟ್ಟಿತು ಬಿಸಿ

Krishnaveni K

ಶನಿವಾರ, 16 ನವೆಂಬರ್ 2024 (14:22 IST)
ಬೆಂಗಳೂರು: ಇದುವರೆಗೆ ರೈತರು, ಮಠ-ಮಂದಿರಗಳಿಗೆ ವಕ್ಫ್ ನೋಟಿಸ್ ಆತಂಕ ತಂದಿತ್ತು. ಆದರೆ ಈಗ ಬಿಜೆಪಿ, ಕಾಂಗ್ರೆಸ್ ಶಾಸಕರಿಗೂ ವಕ್ಫ್ ಬಿಸಿ ತಟ್ಟಿದೆ. ಇಬ್ಬರು ಶಾಸಕರ ಜಮೀನಿನ ಪಹಣಿಯಲ್ಲೂ ವಕ್ಫ್ ಹೆಸರು ನಮೂದಾಗಿದೆ.

ಲಿಂಗಸುಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ಅವರ ಮುದುಗಲ್ ಸರ್ವೇ ನಂಬರ್ 242/4 ರಲ್ಲಿ 1 ಎಕರೆ ಜಮೀನು ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿದೆ. 2007-08 ರಲ್ಲಿ ಈ ಜಮೀನು ಖರೀದಿ ಮಾಡಿದ್ದರು. ಕಾಂಗ್ರೆಸ್ ಎಂಎಲ್ ಸಿ ಶರಣಗೌಡ ಬಯ್ಯಾಪುರ್ ಅವರ ಜಮೀನು ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ. 19 ಗುಂಟೆ ಜಮೀನಿನಲ್ಲಿ ವಕ್ಫ್ ಹೆಸರು ನಮೂದಾಗಿದೆ.

ಇಷ್ಟು ದಿನ ಕೇವಲ ರೈತರು, ಸಾಮಾನ್ಯ ಜನರಿಗೆ ಮಾತ್ರ ವಕ್ಫ್ ಸಂಕಷ್ಟ ಎದುರಾಗಿತ್ತು. ಹೀಗಾಗಿ ರಾಜಕೀಯ ನಾಯಕರು ಇದರ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಈಗ ರಾಜಕಾರಣಿಗಳ ಜಮೀನಿನ ಮೇಲೂ ವಕ್ಫ್ ಮೊಹರು ಬೀಳುತ್ತಿರುವುದು ನೋಡಿದೇಏ ಬುಡಕ್ಕೇ ಬೆಂಕಿ ಹಾಕಿದಂತಾಗಿದೆ.

ಈಗಾಗಲೇ ರಾಜ್ಯ ಬಿಜೆಪಿ ಘಟಕ ವಕ್ಫ್ ವಿರುದ್ಧ ನಮ್ಮ ಭೂಮಿ, ನಮ್ಮ ಹಕ್ಕು ಎಂದು ಹೋರಾಟ ನಡೆಸಲು ತೀರ್ಮಾನಿಸಿದೆ. ಮೂರು ತಂಡಗಳನ್ನು ರಚಿಸಿ ರಾಜ್ಯಾದ್ಯಂತ ವಾಸ್ತವ ಸ್ಥಿತಿ ಅರಿಯಲು ಪ್ರವಾಸ ಮಾಡಲು ತೀರ್ಮಾನಿಸಿದೆ. ಇದೀಗ ರಾಜಕಾರಣಿಗಳ ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್ ನಾಯಕರ ಜಮೀನಿನ ಮೇಲೇ ವಕ್ಫ್ ಹೆಸರು ಬರುತ್ತಿರುವುದು ಅವರ ಬುಡಕ್ಕೇ ಸಂಕಷ್ಟ ಬಂದೆರಗಿದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ