ಬೆಂಗಳೂರು-ಬೇಸಿಗೆ ಆರಂಭದಲ್ಲೇ ರಾಜಧಾನಿಯಲ್ಲಿ ಕುಡಿಯುವ ನೀರಿಗೆ ಅಭಾವ ಶುರುವಾಗಿದೆ.ಬಿಬಿಎಂಪಿ ವ್ಯಾಪ್ತಿಯ ಬಹುತೇಕ ಕಡೆ ನೀರಿನ ಅಭಾವ ಉಂಟಾಗಿದೆ ಎಂದು ಜಲಮಂಡಳಿಗೆ ಹಾಗೂ ಬಿಬಿಎಂಪಿ ಗೆ ಸಾರ್ವಜನಿಕರಿಂದ ಸಾಲು ಸಾಲು ದೂರು ಬಂದಿದೆ.ನೀರಿನ ಅಭಾವ ಹಾಗೂ ಟ್ಯಾಂಕರ್ ದಂದೆ ಬಗ್ಗೆ ವಿಸ್ತೃತ ವರದಿ ಬಿಬಿಎಂಪಿಗೆ ನೀಡಲಾಗಿದೆ.ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ ಹಿನ್ನೆಲೆ ಎಚ್ಚೆತ್ತ ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ ಹೈವೋಲ್ಟೇಜ್ ಸಭೆ ನಡೆಸಲಾಗಿದೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹೈವೋಲ್ಟೆಜ್ ಮೀಟಿಂಗ್ ನಡೆಯುತ್ತಿದ್ದು,ಮೀಡಿಂಗ್ ನಲ್ಲಿ ಬಿಬಿಎಂಪಿಯ ಎಲ್ಲಾ ವಲಯದ ಆಯುಕ್ತರು,ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ.ಇನ್ನೂ ಬಿಬಿಎಂಪಿ 8 ವಲಯದ ವಿಶೇಷ ಆಯುಕ್ತರು,ಚೀಫ್ ಎಂಜನೀಯರ್ಸ್,ಯೋಜನಾ ವಿಭಾಗದ ಅಧಿಕಾರಿಗಳು ಭಾಗಿಯಾಗಿದ್ದಾರೆ.ಇನ್ನೂ 110 ಹಳ್ಳಿಯ ಜೆ.ಸಿ ಅಧಿಕಾರಿಗಳು ಕೂಡ ಬಾಗಿಯಾಗಿದ್ದು, ಸುಮಾರು 80 ಕ್ಕೂ ಹೆಚ್ಚು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
- ಸಮರ್ಪಕ ಕುಡಿಯುವ ನೀರು ಪೂರೈಕೆ..
- ಖಾಸಗಿ ವಾಟರ್ ಟ್ಯಾಂಕರ್ ಮಾಫಿಯಾಗೆ ಕಡಿವಾಣ.
- ಟ್ಯಾಂಕರ್ ನೀರಿಗೆ ದರ ನಿಗಧಿ ಸಾಧ್ಯತೆ.
- ಜೂನ್ ವರೆಗೆ 10 ರಿಂದ 15 ಟಿಎಂಸಿ ನೀರಿನ ಅವಶ್ಯಕತೆ ಹಿನ್ನೆಲೆ.
- ನೀರನ್ನ ಉಳಿಸಿಕೊಂಡು ಸಮರ್ಪಕವಾಗಿ ಬಳಕೆ ಕ್ರಮದ ಬಗ್ಗೆ ಚರ್ಚೆ.
- ಬಿಬಿಎಂಪಿ, ಜಲಮಂಡಳಿಯಿಂದಲೇ ಟ್ಯಾಂಕರ್ ಮೂಲಕ ನೀರು ಸಪ್ಲೇ ಪ್ಲಾನ್.
- 40 ಟ್ಯಾಂಕರ್ ಮೂಲಕ ನೀರು ಸರಬರಾಜು ಬಗ್ಗೆ ಚರ್ಚೆ ನಡೆಸುವ ಭಾಗಿಯಾಗಿದ್ದಾರೆ.