ರೈತರ ಒಳಿತಿಗೆ ನಾವು ಸದಾ ಸಿದ್ಧ

ಮಂಗಳವಾರ, 19 ಸೆಪ್ಟಂಬರ್ 2023 (17:06 IST)
ಕಾವೇರಿ ವಿವಾದ ವಿಚಾರ ಕುರಿತು ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.. ಮಂಡ್ಯದಲ್ಲಿ ಮಾತನಾಡಿದ ಅವರು, ಕಾವೇರಿ ಪ್ರಾಧಿಕಾರದ ಮುಂದೆ ನೀರಿನ ಕೊರತೆ ಬಗ್ಗೆ ಹೇಳಿದ್ದೇವೆ ಎಂದರು. ಇನ್ನು ಶೀಘ್ರದಲ್ಲಿ ಸಭೆ ನಡೆಯಲಿದೆ ಅಲ್ಲಿಯೂ ಸಮರ್ಥ ವಾದ ಮಾಡಲಿದ್ದೇವೆ. ಮತ್ತು ಸಮಿತಿಯ ಆದೇಶ ವಾಪಾಸ್ ಪಡೆಯಲು ಆಗ್ರಹಿಸುತ್ತೇವೆ. ಆದರೆ ನಮ್ಮಲ್ಲಿ ಬೆಳೆಗಳು ಹಾಳಾಗುತ್ತಿವೆ, ಮಳೆ ಬರದಿದ್ದರೆ ಕುಡಿಯುವ ನೀರಿಗೂ ತೊಂದರೆ ಆಗಲಿದೆ ಎಂದು ಸುಪ್ರೀಂ ಕೋರ್ಟ್ ಮುಂದೆ ಹೋಗಲು ನಾವು ತಯಾರಿದ್ದೇವೆ. ಕೋರ್ಟಿಗೂ ವಾಸ್ತವ ಸ್ಥಿತಿ ಮನವರಿಕೆ ಮಾಡಲಿದ್ದೇವೆ ಎಂದಿದ್ದಾರೆ.. ಮುಂದಿನ ವಾರದಲ್ಲಿ ಮಳೆ ಬರುವ ಸಾಧ್ಯತೆ ಇದೆ. ಅವಾಗ 10-12 ಟಿಎಂಸಿ ನೀರು ಶೇಕರಣೆ ಆದರೆ ಎಲ್ಲರಿಗೂ ಒಳ್ಳೆಯದು ಆಗಲಿದೆ. ನೀರಿಲ್ಲ ಎನ್ನಬಹುದು, ಬಿಡಲ್ಲ ಎನ್ನಲಾಗಲ್ಲ. ನಮ್ಮ ರೈತರಿಗೆ ಒಳಿತಾಗಲೂ ನಾವು ಎಲ್ಲದಕ್ಕೂ ಸಿದ್ದರಿದ್ದೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ