ಸಂವಿಧಾನದಂತೆ ನಾವು ನಡೆಯುತ್ತಿದ್ದೇವೆ-ಬಸವರಾಜ್ ಹೊರಟ್ಟಿ
ಇಂದು ಪ್ರಜಾಪ್ರಭುತ್ವ ದಿನ ಹಿನ್ನೆಲೆ ವಿಧಾನಸೌಧದ ಬಳಿ ನಡೆದ ಬನ್ನಿ ಸಂವಿಧಾನ ಓದೋಣ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ ಭಾಷಣ ಮಾಡಿದರು. ಕರ್ನಾಟಕ ಸರ್ಕಾರ ಮಹತ್ವದ ಕಾರ್ಯಕ್ರಮ ಮಾಡಿದೆ. ಸಂವಿಧಾನ ವಿಚಾರದಲ್ಲಿ ಅರ್ಥಪೂರ್ಣ ಕೆಲಸ ಮಾಡಿದೆ. ಪ್ರತೀ ಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಸಂವಿಧಾನ ಬರೆದ ಮಹಾನ್ ಮಾನವತಾವಾದಿ ಅಂಬೇಡ್ಕರ್ ಅವರ ಸಂವಿಧಾನದಂತೆ ನಾವು ನಡೆಯುತ್ತಿದ್ದೇವೆ. ಅಂತ ಮಹನೀಯರು ಮತ್ತೆ ಮತ್ತೆ ಹುಟ್ಟಿಬರಬೇಕು. ನಾನು ಇಂಗ್ಲೆಂಡ್ಗೆ ಹೋದಾಗ ಭಾರತದ ಸಂವಿಧಾನ ಬಗ್ಗೆ ಬರೆದಿದ್ದಾರೆ. ಅಂತಹವರನ್ನ ನಮ್ಮ ನಾಡಿಗೆ ಕೊಡಿಗೆಯಾಗಿ ಕೊಟ್ಟಿದೆ. ನಾವೆಲ್ಲಾ ಬಹಳ ಪುಣ್ಯ ಮಾಡಿದ್ದೇವೆ ಆದ್ದರಿಂದ ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ ಎಂದರು.