ಲೋಕಾಯುಕ್ತಕ್ಕೆ ನಾವು ರದ್ದು ಮಾಡಿಲ್ಲ ಸಿಎಂ ಸಿದ್ದರಾಮಯ್ಯ...!

ಗುರುವಾರ, 13 ಜುಲೈ 2023 (20:52 IST)
ರಾಜ್ಯ ಪಾಲರ ವಂದನಾ ನಿರ್ಣಯ ಮೇಲೆ ಭಾಷಣ ಮಾಡಿದ್ದ ಸದಸ್ಯರಿಗೆ ಇಂದು ಸಿಎಂ ಸಿದ್ದರಾಮಯ್ಯ ಉತ್ತರ ನೀಡಲು ಆರಂಬಿಸಿದರು.ಈ ವೇಳೆ ಭ್ರಷ್ಟಾಚಾರದ ಆರೋಪ ಪ್ರತ್ಯಾರೋಪಗಳು ನಡೆದವು ಸಿದ್ದರಾಮಯ್ಯ ಅವರ ಭಾಷಣದುದ್ದಕ್ಕೂ ಬಿಜೆಪಿ ನಾಯಕರು ಅಡ್ಡಿಪಡಿಸಿದ ಪ್ರಸಂಗ ನಡೆಯಿತು.

ರಾಜ್ಯಲಾಲರ ವಂದನಾ ನಿರ್ಣಯದ ಮೇಲೆ ಮಾತು ಆರಂಭಿಸಿದ ಸಿಎಂ ಸಿದ್ದರಾಮಯ್ಯ ವರ್ಗಾವಣೆ ಆರೋಪ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಆರೋಪದ ಕುರಿತು ಮೊದಲು ಉತ್ತರ ಕೊಡಲು ಮುಂದಾದ ಸಿಎಂ ಯಾರಾದರೂ ವರ್ಗಾವಣೆ ಯಲ್ಲಿ ನಮಗೆ ಗೊತ್ತಿಲ್ಲದೇ ಭ್ರಷ್ಟಾಚಾರ ಮಾಡಿರಬಹುದು.ಆದರೆ ನಮಗೆ ಗೊತ್ತಿರು ಹಾಗೇ  ಯಾರೂ ಕೂಡ ಭ್ರಷ್ಟಾಚಾರ ಮಾಡಿಲ್ಲ.ಭ್ರಷ್ಟಾಚಾರ ಆರೋಪ ಅದು ಕಪೋತ ಕಲ್ಪಿತ ಅಂದುಕೊಂಡಿದ್ದೇನೆ.ನಮ್ ಸರ್ಕಾರದ ಮೇಲೆ ಹೇಳೋಕೆ ಅವರಿಗೆ ಏನು ಇಲ್ಲ.ನಾವು ಐದು ಗ್ಯಾರಂಟಿ ಗಳನ್ನು ಬೇರೆ ಹೇಳಿಬಿಟ್ಡಿದ್ದೇವೆ.ಅವರಿಗೆ ರಾಜಕೀಯ ಭಯ ಶುರುವಾಗಿದೆ.ರಾಜಕೀಯ ಅಭದ್ರತೆ ಶುರುವಾಗಿದೆ.
 
ಇದು ಶುರುವಾದಾಗ ನಮ್ಮ ಮನಸ್ಥಿಗಳು ಬದಲಾವಣೆ ಆಗ್ತಾ ಇರ್ತವೆ.ರಾಜಕೀಯ ಭಯದಿಂದ ಕೆಲವು ಆರೋಪಗಳನ್ನು ಮಾಡಿ ನಮ್ಮನ್ನು ದಾರಿ ತಪ್ಪಿಸುವ ಕೆಲಸ ಮಾಡಿರಬಹುದು ಎಂದು ಕುಮಾರಸ್ವಾಮಿ ಗೆ ಟಾಂಗ್ ನೀಡಿದ್ರು. ಕುಮಾರಸ್ವಾಮಿ ಆವರ ಆರೋಪಕ್ಕೆ ಉತ್ತರ ನೀಡಿದ ಬಳಿಕ ಭ್ರಷ್ಟಾಚಾರದ ಕೇಸ್ ಗಳ ತನಿಖೆ ವಿಚಾರವಾಗಿ ಮಾತು ಆರಂಭಿಸಿದ ಸಿಎಂ ಸಿದ್ದರಾಮಯ್ಯ ಹಿಂದಿನ ಸರ್ಕಾರದ ಅಕ್ರಮಗಳ ಬಗ್ಗೆ ತನಿಖೆಗೆ ನಿರ್ಧಾರ ಮಾಡಿದ್ದೇನೆ.ಬೊಮ್ಮಾಯಿ ಕೂಡ ಅವರ ಹಿಂದಿನ ಸರ್ಕಾರ ಗಳ ಬಗ್ಗೆಯೂ ತನಿಖೆಗೆ ಆಗ್ರಹ ಮಾಡಿದ್ದಾರೆ.ನಮ್ಮ ಕಾಲದಲ್ಲಿ ಭ್ರಷ್ಟಾಚಾರ ಆಗಿದ್ರೆ ತನಿಖೆ ಮಾಡಿಸಿ ಎಂದು ಹಿಂದೆ ನಾನು ಒಂದು ಹತ್ತು ಬಾರಿ ಹೇಳಿದ್ದೇನೆ.ಹಿಂದೆ ಯಡಿಯೂರಪ್ಪ, ಬೊಮ್ಮಾಯಿ ಅಧಿಕಾರದಲ್ಲಿದ್ರು.ಅವಾಗ ತನಿಖೆ ಮಾಡಿಸಬಹುದಿತ್ತಲ್ಲ.ನಾವು ಯಾರು ಅಡ್ಡ ಬರುತ್ತಿರಲಿಲ್ಲ.ನೀವು ತನಿಖೆ ಮಾಡಿಸಬಹುತ್ತಿಲ್ಲ. ಅಧಿಕಾರ ಇವರ ಕೈಯಲ್ಲೇ ಇತ್ತಲ್ಲ..?ಯಾಕೆ ಮಾಡಿಲ್ಲ ಅಂದರೆ ನಮ್ಮ ಮೇಲೆ ಆರೋಪಕ್ಕೆ ದಾಖಲೆ ಗಳು ಇಲ್ಲ ಅಂತಾ ತನಿಖೆ ಮಾಡ್ತಾ ಇರಲಿಲ್ಲ ಎಂದು ಹೇಳಿದರು
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ