600 ಸ್ಥಳಗಳಲ್ಲಿ ನಾವು ತೆರವು ಕಾರ್ಯಚರಣೆ ಮಾಡಬೇಕಿದೆ - ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್

ಸೋಮವಾರ, 19 ಜೂನ್ 2023 (21:00 IST)
ತೆರವು ಕಾರ್ಯಚರಣೆ ವೇಳೆ ಹೆಚ್ಚಿನ ಪೊಲೀಸ್ ಪ್ರೊಡಕ್ಷನ್ ಗೆ ಚೀಫ್ ಇಂಜಿನಿಯರ್ ಲೋಕೇಶ್ ನಮಗೆ ಮನವಿ ಮಾಡಿದ್ರು.ದೊಡ್ಡ ನಕ್ಕುದ್ದಿ ಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ತೆಗೆದುಕೊಳ್ಳಲಾಗಿದೆ.ಯಾರು ಗಲಾಟೆ ಮಾಡುತ್ತಿದ್ದಾರೆ ನನಗೆ ಗೊತ್ತಿಲ್ಲ.ಯಾರಾದ್ರು ಗಲಾಟೆ ಮಾಡಿದ್ರೆ ಪೊಲೀಸರು ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
 
ನಮ್ಮ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ರೆ ಕ್ರಮ ಜರಗುತ್ತೆ.600 ಸ್ಥಳಗಳಲ್ಲಿ ನಾವು ತೆರವು ಕಾರ್ಯಚರಣೆ ಮಾಡಬೇಕಿದೆ .110 ಕಡೆ ಕೋರ್ಟ್ ನಿಂದ  ಆದೇಶ ನೀಡಿದ್ದಾರೆ .ಅದನ್ನು ಪೂರ್ಣ ಗೊಳಿಸಿದ್ರೆ 
110/ರಿಂದ 125  ಸರ್ವೆ ನಂಬರ್ ವರೆಗೂ ಕ್ಲಿಯರ್ ಆಗುತ್ತೆ .ಸ್ಪಸ್ ಗಾರ್ಡನ್ ನಲ್ಲಿ ಮೋರಿ ಮೇಲೆ ಕಟ್ಟಡ ಕಟ್ಟಲು ಅನುಮತಿ ನೀಡಿದ ವಿಚಾರವಾಗಿ ಯಾವ ಟೈಮ್ ನಲ್ಲಿ ಯಾರ್ಯಾರು ಅನಧಿಕೃತವಗಿ ಕಟ್ಟಿದ್ದಾರೆ .ಅದನ್ನೆ ಇವಾಗ ತೆರವು ಮಾಡ್ತಾ ಇರೋದು .ಕಂದಾಯ ಇಲಾಖೆ ಅವರು ಎಲ್ಲಿ ಎಲ್ಲಿ ಸರ್ವೆ ರಿಪೋರ್ಟ್ ನೀಡಿದಾರೆ ಅಲ್ಲಿ ತೆರವುಗೊಳಿಸಲಾಗುತ್ತಿದೆ.ಯಾವ ಅಧಿಕಾರಿಗಳು ಅನಧಿಕೃತ ಕಟ್ಟಡ ಕಟ್ಟಲು ಅವಕಾಶ ಕೊಟ್ಟಿದ್ರು ಅವರ ಮೇಲೆ ತನಿಖೆ ಆಗುತ್ತೆ.ಹಲವು ಕಡೆ ಇದೇ ಕಾರಣಕ್ಕೆ 
ಕೋರ್ಟ್ ನಲ್ಲಿ ಒತ್ತುವರಿದಾರರಿಗೆ  ಸ್ಟೇ ಸಿಕಿದ್ದೆ ಹಾಗಾಗಿ ತೆರವು ಕಾರ್ಯಕ್ಕೆ ಅಡಚಣೆ ಆಗುತ್ತಿದೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.
 
ಅಲ್ಲದೇ 29ನೇ ತಾರೀಖಿನಿಂದ ಗುತ್ತಿಗೆದಾರರು ಪ್ರತಿಭಟನೆ ವಿಚಾರವಾಗಿ ಎರಡು‌ ತಿಂಗಳಲ್ಲಿ ಬಿಲ್ ಪೇಮೆಂಟ್ ಮಾಡಿದ್ದೇವೆ.ಜನವರಿ ಹಾಗೂ ಮಾರ್ಚ್ ತಿಂಗಳ ಬಿಲ್ ಪೇಮೆಂಟ್ ಆಗಿದೆ .ಉಳಿದ ತಿಂಗಳು ಗಳ ಬಿಲ್ ಸಹ ಕ್ಲಿಯರ್ ಮಾಡುತ್ತೇವೆ ಅವರೊಂದಿಗೆ ಮಾತನಾಡುತ್ತೇವೆ ಎಂದು ಬಿಬಿಎಂಪಿ ಮುಖ್ಯ ಅಯುಕ್ತ ತುಷಾರ್ ಗಿರಿನಾಥದ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ