ನಾನು ಸೈಲೆಂಟಾಗಿಲ್ಲ, ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದೇನೆ. ವರಿಷ್ಠರು ಏನು ಹೇಳ್ತಾರೆ ಅದರಂತೆ ನಡೆದುಕೊಳ್ತೇವೆ ಎಂದು ಹೇಳಿದ್ರು. ಸವದಿಗೆ ಮುಂದೆ BJPಯಿಂದ ಟಿಕೆಟ್ ಕೊಡ್ತಾರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು MLC, ನಾನು MLA ಆಗಿದ್ದೇನೆ. ಇಬ್ಬರು ಪಕ್ಷದ ಕೆಲಸ ಮಾಡ್ತಿದ್ದೇವೆ. ಟಿಕೆಟ್ ಕೊಡುವುದು ವರಿಷ್ಠರಿಗೆ ಬಿಟ್ಟಿದ್ದು. ನಮ್ಮ ವರಿಷ್ಠರು ಏನು ಹೇಳ್ತಾರೆ ಅದರಂತೆ ನಡೆದುಕೊಳ್ತೇವೆ. ಯಾವುದೇ ಅಸಮಾಧಾನ ಇಲ್ಲ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.