ನಕ್ಸಲ್‌ ಶರಣಾಗತಿ ಪರಿಹಾರ ನಮಗೂ ಸಿಗಬೇಕು: ಎನ್‌ಕೌಂಟರ್‌ಗೆ ಬಲಿಯಾದ ವಿಕ್ರಂ ಗೌಡ ಸಹೋದರಿ ಅಳಲು

Sampriya

ಬುಧವಾರ, 8 ಜನವರಿ 2025 (15:40 IST)
Photo Courtesy X
ಉಡುಪಿ: ‌‌ರಾಜ್ಯ ಸರ್ಕಾರವು ನಕ್ಸಲರಿಗೆ ಶರಣಾಗತಿ ನೀಡುವ ಪರಿಹಾರ ಕೊಡಬೇಕು ಎಂದು ಮೃತ ನಕ್ಸಲ್‌ ಕಾರ್ಯಕರ್ತ ವಿಕ್ರಂ ಗೌಡ  ಸಹೋದರಿ ಸುಗುಣ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಳೆದ ನವೆಂಬರ್‌ 19ರಂದು ಹೆಬ್ರಿ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ನಕ್ಸಲ್‌ ಕಾರ್ಯಕರ್ತ ವಿಕ್ರಂ ಗೌಡನನ್ನು ಎನ್‌ಕೌಂಟರ್‌ ಮಾಡಿ ಹತ್ಯೆ ಮಾಡಲಾಗಿತ್ತು.

ಎನ್‌ಕೌಂಟರ್‌ ಆಗಿದೆ, ಜೀವವೂ ಹೋಗಿದೆ. ಅಣ್ಣನ ಜೀವ ವಾಪಸ್ ಕೊಡೋದಕ್ಕೆ ಸಾಧ್ಯವಿಲ್ಲ, ಪರಿಹಾರ ಆದ್ರೂ ನೀಡಿ ಅಂತ ಅಳಲು ತೋಡಿಕೊಂಡಿದ್ದಾರೆ.

ನಾವು ಕಷ್ಟದಲ್ಲಿದ್ದೇವೆ, ಸ್ವಂತ ಮನೆಯಾಗಬೇಕಿದೆ. ಒಂದು ದಿನ ಕೆಲಸಕ್ಕೆ ಹೋಗದಿದ್ದರೂ ನಮ್ಮ ದಿನ ಸಾಗೋದಿಲ್ಲ. ಸರೆಂಡರ್ ಆಗುವವರಿಗೆ ಕೊಡೋ ಪರಿಹಾರ ನಮಗೂ ಕೊಡಿ ಸಾಕು ಎಂದು ಸುಗುಣ ಕೋರಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ