ನಾಳೆ ಬ್ರ್ಯಾಂಡ್ ಬೆಂಗಳೂರು ಕುರಿತು ಚರ್ಚೆ ಮಾಡ್ತಾಯಿದ್ದೇವೆ-ಡಿಸಿಎಂ ಡಿಕೆಶಿವಕುಮಾರ್

ಭಾನುವಾರ, 8 ಅಕ್ಟೋಬರ್ 2023 (13:02 IST)
ಪಟಾಕಿ ದುರಂತ ವಿಚಾರವಾಗಿ ಡಿಸಿಎಂ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ನಿನ್ನೆ ರಾತ್ರಿ ನಡೆದ ಪಟಾಕಿ ದುರಂತ ಬಹಳ ನೋವು ಉಂಟುಮಾಡಿದೆ.ಆದರಲ್ಲಿ ಯುವಕರೇ ಇದ್ರು ತಮಿಳುನಾಡಿನ ಅವರು ಕೆಲಸ ಮಾಡ್ತಾಯಿದ್ರು ಏನ್ ಮಿಸ್ಟೆಕ್ ಆಗಿದಿಯೋ ಗೊತ್ತಿಲ್ಲ.ತನಿಖೆ ಅಂತು ಮಾಡ್ತಾಯಿದ್ದೇವೆ .ಈಗಾ ರವಿ ಕಾಂತೇಗೌಡ ಕರೆ ಮಾಡಿದ್ರು 14 ಜನ‌ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.ಈಗಾಲೇ ಅವರಿಗೆ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದೇವೆ .ತಮಿಳುನಾಡಿನವರು ಅವರಿಗೆ 3 ಲಕ್ಷ . ರೂ ಕೊಟ್ಟಿದ್ದಾರೆ.ಮುಂದೆ ಈ ರೀತಿ ಘಟನೆ ನಡೆಯದಂತೆ ರಾಜ್ಯದ ಎಲ್ಲಾ ಡಿಸಿ ಗಳಿಗೆ,ಪೊಲಿಸ್ ಅಧಿಕಾರಿಗಳಿಗೆ ಸೂಚನೆ ಕೊಡ್ತಾಯಿದ್ದೇವೆ .ಸಿಎಂ ಅವರು ಮೈಸೂರು ಬಿಟ್ಟಿದ್ದಾರೆ ಘಟನೆ ಸ್ಥಳಕ್ಕೆ ಬರ್ತಾಯಿದ್ದಾರೆ ನಾನು ಕೂಡಾ ಹೊಗ್ತಾಯಿದ್ದೇನೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.
 
ಅಲ್ಲದೇ ರಾಜರಾಜೇಶ್ವರಿ ಕ್ಷೇತ್ರಕ್ಕೆ ಅನುದಾನ ತಾರತಮ್ಯ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಬೊಮ್ಮಾಯಿ ಅವರು ಏನ್ ಹೇಳಿಕೆ ಕೊಟ್ಟಿದ್ದಾರೆ ವಿಧಾನ ಪರಿಷತ್ ನಲ್ಲಿ ಏನ್ ಉತ್ತರ ಕೊಟ್ಟಿದ್ದಾರೆ ಅದನ್ನ ನಾವು ಪಾಲಿಸುತ್ತಿದ್ದೇವೆ .ಇನ್ನೂ ಎಐಸಿಸಿ ಕಾರ್ಯಕಾರಿ ಸಭೆ ವಿಚಾರವಾಗಿ ನಾಳೆ ನಾನು ದೆಹಲಿ ಹೊಗ್ತಾಯಿಲ್ಲ .ನಾಳೆ ಬ್ರ್ಯಾಂಡ್ ಬೆಂಗಳೂರು ಕುರಿತು ಚರ್ಚೆ ಮಾಡ್ತಾಯಿದ್ದೇವೆ .ಸುಮಾರು 70 ಸಾವಿರ ಸಲಹೆಗಳು ಬಂದಿದ್ದಾವೆ .ಸಲಹೆಗಳನ್ನ ಎಲ್ಲಾ ಕ್ರೋಢೀಕರಿಸಿ ಚರ್ಚೆ ಮಾಡುತ್ತೇವೆ.ನಾಳೆ ಜ್ಞಾನಜ್ಯೋತಿ ಆಡಿಟೋರಿಯಂ ನಲ್ಲಿ ಕಾರ್ಯಕ್ರಮ ಮಾಡ್ತಾಯಿದ್ದೇವೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ