ಪ್ರಾಧಿಕಾರ ನಿರ್ಮಾಣ ಮಾಡಿರೋ ವಿವಿಧ ಬಡಾವಣೆಗಳ ಸೈಟ್ ಗಳ ಲೆಕ್ಕ ಎನ್ ಜಯರಾಮ್ ಕೇಳಿದ್ದಾರೆ.ಅಭಿವೃದ್ಧಿಪಡಿಸಿದ ಲೇಔಟ್‌ಗಳಲ್ಲಿ ಎಷ್ಟು ನಿವೇಶನಗಳು ಮಾರಾಟವಾಗಿವೆ...?ಎಷ್ಟು ಖಾಲಿಯಿವೆ? ಯಾವುದರಲ್ಲಿ ಏನು ಸಮಸ್ಯೆಯಿದೆ ಮಾಹಿತಿ ಕೊಡಿ ಎಂದು ಬಿಡಿಎ ಕಾರ್ಯದರ್ಶಿ ಹಾಗೂ ಉಪಕಾರ್ಯದರ್ಶಿಗಳ ಬಳಿ ಬಿಡಿಎ ಕಮಿಷನರ್ ಜಯರಾಮ್ ಮಾಹಿತಿ ಕೇಳಿದ್ದಾರೆ.ರಜೆ ಅವಧಿಯಲ್ಲಿ ಕಾರ್ಯ ನಿರ್ವಹಿಸಿ ಮಾಹಿತಿ ಒದಗಿಸುವಂತೆ ಬಿಡಿಎ ಆಯುಕ್ತರಿಂದ ಪತ್ರದ ಮೂಲಕ ಆದೇಶ ಹೊರಡಿಸಲಾಗಿದೆ.