ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ ಮಂಡಿಸಿಯೇ ಸಿದ್ದ : ಸಿಎಂ ಘೋಷಣೆ
ಶುಕ್ರವಾರ, 17 ನವೆಂಬರ್ 2017 (16:21 IST)
ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ ಮಂಡಿಸಿಯೇ ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಖಾಸಗಿ ವೈದ್ಯರ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಸೂದೆಯೇ ಬೇಡ ಎಂದು ಹೇಳುವುದನ್ನು ಸರಕಾರ ಒಪ್ಪುವುದಿಲ್ಲ. ಅದರಲ್ಲಿ ಯಾವ ತಿದ್ದುಪಡಿ ಬೇಕು ಎನ್ನುವುದನ್ನು ಮಾತ್ರ ಹೇಳಿ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ವಿಧೇಯಕದಲ್ಲಿರುವ ಅಂಶಗಳ ಬಗ್ಗೆ ಮಾಹಿತಿ ಗೊತ್ತಿರದೆ ಮುಷ್ಕರ ಮಾಡಿದ್ದು ಎಷ್ಟು ಸರಿ? ಇಂದಿನ ಪರಿಸ್ಥಿತಿಗೆ ಯಾರು ಹೊಣೆ?. ಸೂಕ್ತ ಚಿಕಿತ್ಸೆ ನೀಡದೆ ವ್ಯಕ್ತಿ ಸತ್ತರೆ ನಿಮ್ಮನ್ನು ಕೊಲೆಗಾರ ಎನ್ನಬಾರದೇ? ಎಂದು ವೈದ್ಯರ ವಿರುದ್ಧ ಗರಂ ಆದರು.
ವಿಧೇಯಕ ಬೇಡವೇ ಬೇಡ ಎನ್ನುವುದನ್ನು ಬಿಟ್ಟು ಬೇರೆ ಏನಾದರೂ ತೊಂದರೆಗಳಿದ್ದರೆ ಸರಕಾರದ ಗಮನಕ್ಕೆ ತನ್ನಿ. ವೈದ್ಯರು ಪ್ರತಿಭಟನೆ ಮಾಡುವುದು ಸರಿಯಲ್ಲ. ಜನರಿಗೆ ಎಷ್ಟೊಂದು ತೊಂದರೆಯಾಗಿದೆ ಹಲವಾರು ಜೀವಗಳು ಬಲಿಯಾಗಿವೆ ಅದಕ್ಕೆ ನೀವು ಹೊಣೆಯಾಗ್ತೀರಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಲ ಜಿಲ್ಲೆಗಳಲ್ಲಿ ಖಾಸಗಿ ವೈದ್ಯರ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಹಣ ನೀಡಲಾಗಿದೆ.ಇದೊಂದು ರಾಜಕೀಯ ಪ್ರೇರಿತ ಮುಷ್ಕರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.