‘ಬಳ್ಳಾರಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಬಿಡಲ್ಲ'-ಜನಾರ್ದನ ರೆಡ್ಡಿ ಹೀಗ್ಯಾಕೆ ಹೇಳಿದ್ರು ಗೊತ್ತಾ...?

ಸೋಮವಾರ, 22 ಜನವರಿ 2018 (15:06 IST)
ಬೆಂಗಳೂರು : ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ‘ಬಳ್ಳಾರಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಬಿಡಲ್ಲ. ಅಲ್ಲಿಯ ಪ್ರತಿಯೊಬ್ಬ ನಾಗರಿಕನು ಒಬ್ಬೊಬ್ಬ ಜನಾರ್ದನ ರೆಡ್ಡಿಯಾಗಿ ಶ್ರೀರಾಮುಲು  ಅವರ  ಕೈ ಬಲ ಪಡಿಸಿ ಬಳ್ಳಾರಿಯ 8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುತ್ತೇವೆ ‘ಎಂದು ಹೇಳಿದ್ದಾರೆ.


ಬೆಂಗಳೂರಿನ ಕಾರ್ಯಕ್ರಮಯೊಂದರಲ್ಲಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸಿಎಂ ಸಿದ್ದರಾಮಯ್ಯ ಅವರು ಬಳ್ಳಾರಿ ಶಾಸಕರಾದ ಆನಂದ್ ಸಿಂಗ್ ಹಾಗು ನಾಗೇಂದ್ರ ಅವರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಲು ಹುನ್ನಾರ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಅವರ ಕನಸು ಕನಸಾಗಿ ಉಳಿಯುತ್ತದೆ. ಮಾತು ಮಾತಿಗೂ ಸಿಎಂ ಸಿದ್ದರಾಮಯ್ಯ ಅವರು ಅಮಿತ್ ಶಾ ಜೈಲು, ಯಡಿಯೂರಪ್ಪ ಜೈಲು , ಜನಾರ್ದನ ರೆಡ್ಡಿ ಜೈಲು ಎಂದು ವ್ಯಂಗ್ಯವಾಡುತ್ತಾರೆ. ಮುಂದೆ ಇದಕ್ಕೆ ಬಿಜೆಪಿ ಕಾರ್ಯಕರ್ತರು ತಕ್ಕಪಾಠ ಕಲಿಸುತ್ತಾರೆ’ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ