ನಾವು ಗೈಡ್ ಲೈನ್ಸ್ ಬಿಟ್ಟು ಬರಘೋಷಣೆ ಮಾಡಲ್ಲ- ಚೆಲುವರಾಯಸ್ವಾಮಿ
ನಾವು ಗೈಡ್ ಲೈನ್ಸ್ ಬಿಟ್ಟು ಬರಘೋಷಣೆ ಮಾಡಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.ವಿಧಾನಸೌಧದಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಬರಗಾಲ ಘೋಷಣೆ ವಿಚಾರವಾಗಿ ಮಾತನಾಡಿದ ಅವರು ಬರಗಾಲ ಘೋಷಣೆಗೆ ಗೈಡ್ ಲೈನ್ಸ್ ಇದೆ.ಬರದ ಬಗ್ಗೆ ನಮಗೆ ಸಂಪೂರ್ಣ ಮಾಹಿತಿಯಿದೆ.ಆದರೆ ಗೈಡ್ ಲೈನ್ಸ್ ಅಡ್ಡ ಬರ್ತಿವೆ.೧೦ ಕೆಜಿ ಅಕ್ಕಿ ಕೊಡ್ತಿದ್ದೇವೆ,೨೦೦೦ ಹಣ ಕೊಡ್ತಿದ್ದೇವೆ.ಇದೆಲ್ಲವೂ ರೈತರಿಗೆ ಸಿಗುತ್ತೆ,ಅನುಕೂಲವಾಗುತ್ತೆ.ನಾವು ಗೈಡ್ ಲೈನ್ಸ್ ಬಿಟ್ಟು ಬರಘೋಷಣೆ ಮಾಡಲ್ಲ.ನಾವು ೧೦೦ ಕ್ಕೂ ಹೆಚ್ಚು ತಾಲೂಕು ಬರ ಘೋಷಿಸ್ತೇವೆ. ಮೋಡಬಿತ್ತನೆ ಬಗ್ಗೆ ಚಿಂತನೆಯಿಲ್ಲ.ಅದರಿಂದ ಹಿಂದೆ ಯಾವ ಪ್ರಯೋಜವಾಗಿಲ್ಲ.ನಾವು ಮೋಡಬಿತ್ತನೆ ಮಾಡಲ್ಲ ಎಂದು ಹೇಳಿದರು.