ಕಲಬುರಗಿಯಲ್ಲಿ ಡಿಸಿಎಂ ಮಾಡಿದ್ದೇನು?

ಶುಕ್ರವಾರ, 17 ಮೇ 2019 (16:42 IST)
ಚಿಂಚೋಳಿ ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಕೈ ಪಡೆ ವಿವಿಧ ಸಮುದಾಯಗಳ ಮೊರೆ ಹೋಗಿದೆ.

ಕಲಬುರ್ಗಿಯ ಗ್ರ್ಯಾಂಡ್ ಹೋಟೆಲ್ ನಲ್ಲಿ ಸವಿತಾ ಸಮಾಜದ ಸಭೆ ನಡೆಸಲಾಯಿತು. ಸವಿತಾ ಸಮಾಜದ ಮುಖಂಡರ ಜೊತೆ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ರು.

ಡಿಸಿಎಂ ಜಿ.ಪರಮೇಶ್ವರ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಉಪಸ್ಥಿತಿ ಇದ್ರು.
ಚಿಂಚೋಳಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ರಣತಂತ್ರದ ಭಾಗವಾಗಿ ಈ ಸಭೆಯನ್ನು ಕೈ ಪಡೆ ನಡೆಸಿತು.

ತಮ್ಮ ಅಹವಾಲುಗಳನ್ನು ಹೇಳೋದಾಗಿ ತಿಳಿಸಿದ್ದರಿಂದ ಸವಿತಾ ಸಮಾಜದ ಸಭೆ ಮಾಡುತ್ತಿದ್ದೇವೆ. ಈ ವೇಳೆ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆಯೂ ಮನವಿ ಮಾಡಲಾಗುವುದು ಅಂತ ಡಿಸಿಎಂ ಪರಮೇಶ್ವರ ಹೇಳಿಕೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ