ಖಾತೆ ಹಂಚಿಕೆಯ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಗುರುವಾರ, 27 ಡಿಸೆಂಬರ್ 2018 (11:51 IST)
ಹುಬ್ಬಳ್ಳಿ : ರಮೇಶ್ ಜಾರಕಿಹೊಳಿ ಬೇಸರಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಾರಕಿಹೊಳಿ ಮಂತ್ರಿ ಸ್ಥಾನದಿಂದ ತೆಗೆದಿದ್ದಕ್ಕೆ ಬೇಸರಗೊಂಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಅವರು ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ರಮೇಶ್ ಜಾರಕಿಹೊಳಿ ಮೂಲತಃ ಕಾಂಗ್ರೆಸ್ ವ್ಯಕ್ತಿ. ಅವರು ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತಾರೆ. ಕಾಂಗ್ರೆಸ್ ಶಾಸಕರು ಯಾರು ಬಿಜೆಪಿಗೆ ಹೋಗಲ್ಲ . ಅದೆಲ್ಲ ಕೇವಲ ಸುಳ್ಳಾಗಿದೆ. ಮುಂದೆಯೂ ಸುಳ್ಳಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಖಾತೆ ಹಂಚಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು,’ಎಲ್ಲಾ ಸಚಿವರಿಗೆ ರಾಹುಲ್ ಗಾಂಧಿ ಖಾತೆಗಳನ್ನು ಹಂಚಲಿದ್ದಾರೆ. ಗೃಹ ಖಾತೆ ಇಂತವರಿಗೆ ಕೊಡಬೇಕೆಂದು ನಾನು ಪಟ್ಟು ಹಿಡಿದಿಲ್ಲ. ಸಚಿವ ಸ್ಥಾನ ಹಂಚಿಕೆ ಬಗ್ಗೆ ನನ್ನ ಅಭಿಪ್ರಾಯ ವೇಣುಗೋಪಾಲ್ ಗೆ ಹೇಳಿದ್ದೇನೆ. ಅವರು ಹೈಕಮಾಂಡ್ ಬಳಿ ಹೇಳಿ ತೀರ್ಮಾನಿಸುತ್ತಾರೆ’ ಎಂದು ಹೇಳಿದ್ದಾರೆ.
ಉಮೇಶ್ ಕತ್ತಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ‘ಕತ್ತಿ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಅದಕ್ಕೆ ಹೀಗೆ ಹೇಳೋದು, ಸರ್ಕಾರಕ್ಕೆ ಏನೂ ಆಗಿಲ್ಲ, ಯಾವುದೇ ಸಮಸ್ಯೆಯಿಲ್ಲ. ಮೈತ್ರಿ ಸರ್ಕಾರ ಅಧಿಕಾರಾವಧಿ ಪೂರೈಸಲಿದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಇದೆ. ಜೆಡಿಎಸ್ ನವರಿಗೆ ಎಷ್ಟು ಕ್ಷೇತ್ರಬೇಕು ಎಂದು ನಮಗೆ ಇನ್ನೂ ಹೇಳಿಲ್ಲ. ಸಭೆಯಲ್ಲಿ ಚರ್ಚೆಗೆ ಕುಳಿತಾಗ ತೀರ್ಮಾನ ಮಾಡುತ್ತೇವೆ. ಅವರು ಎಷ್ಟು ಕೇಳ್ತಾರೆ ಎಷ್ಟರಲ್ಲಿ ಗೆಲ್ಲಬಹುದು ಎನ್ನುವುದು ಚರ್ಚೆಗೆ ಬರಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.