ಕಾವೇರಿ ತೀರದ ಮನೆಗಳ ಬಗ್ಗೆ ಸಚಿವ ಸೋಮಣ್ಣ ಹೇಳಿದ್ದೇನು?

ಶನಿವಾರ, 8 ಆಗಸ್ಟ್ 2020 (20:24 IST)
ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಅಪಾರ ಹಾನಿಯಾಗುತ್ತಿದೆ.


ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಶಾಲನಗರದ ಕುವೆಂಪು ಮತ್ತು ಸಾಯಿ ಬಡಾವಣೆಗಳಿಗೆ ಭೇಟಿ ನೀಡಿ ಜಲಾವೖತಗೊಂಡ ಮನೆಗಳ ಮಾಲೀಕರೊಂದಿಗೆ ಸಚಿವರು ಸಮಾಲೋಚನೆ ನಡೆಸಿದರು.

ಕಾವೇರಿ ನದಿ ತೀರದಲ್ಲಿ ಅನೇಕರು ಅಪಾಯದ ಅರಿವಿಲ್ಲದೇ ಮನೆಗಳನ್ನು ನಿಮಿ೯ಸಿಕೊಂಡಿದ್ದು, ಈಗ ಸಮಸ್ಯೆ ಎದುರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂಥ ಸಮಸ್ಯೆ ಮರುಕಳಿಸದಂತೆ ಸಕಾ೯ರದಿಂದ ಶಾಶ್ವತ ಯೋಜನೆ ರೂಪಿಸಲಾಗುತ್ತದೆ ಎಂದೂ ಸಚಿವರು ಭರವಸೆ ನೀಡಿದರು.

ಶಾಸಕ ರಂಜನ್ ಪ್ರಯತ್ನದಿಂದ ಈ ಬಾರಿ ಕಾವೇರಿ ನದಿ ಹೂಳೆತ್ತುವ ಕಾಯ೯ಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾಮಗಾರಿಗೆ ಚುರುಕು ನೀಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ