ಶ್ರೀರಾಮುಲು ಬಗ್ಗೆ ಕರುಣಾಕರ ರೆಡ್ಡಿ ಸಿಡಿಸಿದ ಬಾಂಬ್ ಏನು ಗೊತ್ತಾ?

ಗುರುವಾರ, 25 ಅಕ್ಟೋಬರ್ 2018 (15:56 IST)
ಮಾಜಿ ಸಚಿವ ಜನಾರ್ಧನ ರೆಡ್ಡಿ ಜತೆಗೆ ಸಕ್ರೀಯ ರಾಜಕಾರಣದಲ್ಲಿ ಭಾಗಿಯಾಗುವ ಬಗ್ಗೆ ಕಾಲವೇ ಹೇಳುತ್ತೆ ಎಂದಿರುವ ಹರಪ್ಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ, ಬಿ.ಶ್ರೀರಾಮುಲು ಬಗ್ಗೆಯೂ ಹೇಳಿಕೆ ನೀಡಿದ್ದಾರೆ.

ನನ್ನ ಹಾಗೂ ಶ್ರೀರಾಮುಲು ಮಧ್ಯೆ ಯಾವುದೇ ಅಸಮಾಧಾನವಿಲ್ಲ. ಬಳ್ಳಾರಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಜನಾರ್ಧನ ರೆಡ್ಡಿ ಜೊತಗೆ ಸಕ್ರೀಯ ರಾಜಕಾರಣದಲ್ಲಿ ಭಾಗಿಯಾಗುವ ಬಗ್ಗೆ ಕಾಲವೇ ಹೇಳುತ್ತೆ ಎಂದು ಹರಪ್ಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಹೇಳಿದ್ದಾರೆ.

ಜಮಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಪ್ರಚಾರಕ್ಕಾಗಿ ಬಾಗಲಕೋಟೆಗೆ ಆಗಮಿಸಿದ್ದ ಕರುಣಾಕರ ರೆಡ್ಡಿ, ಸಹೋದರರ ನಡುವಿನ ಮುನಿಸು, ವಯಕ್ತಿಕ ವಿಚಾರ, ಮಾಧ್ಯಮಗಳ ಎದುರು ಹೇಳಲು ಇಷ್ಟಪಡೋದಿಲ್ಲ, ನನಗೆ ಇದುವರೆಗೂ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಜೆ, ಶಾಂತಾ ಪರ ಪ್ರಚಾರಕ್ಕೆ ಯಾರೂ ಕರೆದಿಲ್ಲ. ಪಕ್ಷದ ಮುಖಂಡರು ಸೂಚಿಸಿದರೆ ಖಂಡಿತವಾಗಿಯೂ ಪ್ರಚಾರ ಮಾಡುತ್ತೇನೆ ಎಂದರು.
ಸಿದ್ದರಾಮಯ್ಯನವರು ಬಿ.ಶ್ರೀರಾಮುಲುಗೆ 420 ಎಂದ ಹೇಳಿಕೆಗೆ ತಿಗೇಟು ನೀಡಿ, ರಾಜಕಾರಣದಲ್ಲಿ ಟೀಕೆಗಳಿರಬೇಕು.
ಆದರೆ ಯಾರೂ ಪದಗಳನ್ನ ತಪ್ಪಾಗಿ ಬಳಸಬಾರದು. ಗೌರವಯುತವಾಗಿ ಮಾತನಾಡಬೇಕು ಎಂದರು.

ಇನ್ನು ಬಳ್ಳಾರಿಗೆ ಡಿ.ಕೆ.ಶಿವಕುಮಾರ ಲಗ್ಗೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಳ್ಳಾರಿಯಲ್ಲಿ 22 ವರ್ಷದಿಂದ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದೇವೆ. ಜನರು ಬಿಜೆಪಿಗೆ ಆಶೀರ್ವಾದ ಮಾಡುತ್ತಾ ಬಂದಿದ್ದಾರೆ. ರಾಜಕೀಯದಲ್ಲಿ ಯಾರು ಲಗ್ಗೆ ಇಡುತ್ತಾರೆ ಎಂಬ ಪ್ರಶ್ನೆ ಬರೋದಿಲ್ಲ. ಆದ್ರೆ ಯಾರೇ ಲಗ್ಗೆ ಇಟ್ಟರೂ ಜನ ತೀರ್ಮಾನ ಮಾಡುತ್ತಾರೆ ಎಂದರು. ನಾವು ಯಾವುದೇ ಸಮುದಾಯಕ್ಕೆ ಸೀಮಿತವಾದವರಲ್ಲ. ಪಕ್ಷದ ವರಿಷ್ಠರು ಎಲ್ಲೆಲ್ಲಿ ಪ್ರಚಾರಕ್ಕೆ ಹೇಳ್ತಾರೋ ಅಲ್ಲಿಗೆ ಹೋಗಿ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡುತ್ತೇನೆ ಎಂದರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ