ಮದ್ಯದ ಬದಲಾಗಿ ಸ್ಯಾನಿಟೈಸರ್ ಕುಡಿದರೆ ಏನಾಗುತ್ತೆ?

ಶುಕ್ರವಾರ, 17 ಏಪ್ರಿಲ್ 2020 (14:45 IST)
ಲಾಕ್ ಡೌನ್ ನಿಂದ ಮದ್ಯ ಸಿಗದೇ ಕೆಲವರು ಸ್ಯಾನಿಟೈಸರ್ ಕುಡಿದಿರೋದು ಬಯಲಾಗ್ತಿದೆ. ಹೀಗೆ ಸ್ಯಾನಿಟೈಜರ್ ಕುಡಿದರೆ ಏನಾಗುತ್ತದೆ ಗೊತ್ತಾ?

ಹುಬ್ಬಳ್ಳಿಯಲ್ಲಿ ಕೆಲವು ಯುವಕರು ಮತ್ತು ವ್ಯಕ್ತಿಗಳು ಸ್ಯಾನಿಟೈಸರ್‌ಗಳನ್ನು ಸೇವಿಸುತ್ತಿದ್ದಾರೆ ಎಂಬ ವರದಿಗಳು ಮಾಧ್ಯಮದಲ್ಲಿ ಪ್ರಸಾರವಾಗಿವೆ. ಕೊರೊನಾ ನಿಯಂತ್ರಣಕ್ಕಾಗಿ ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್‌ಗಳು ಬಾಹ್ಯ ಉಪಯೋಗಕ್ಕೆ ಮಾತ್ರ ಸೀಮಿತವಾಗಿದೆದ್ದು, ಯಾವುದೇ ಕಾರಣಕ್ಕೂ ಸೇವನೆಗೆ ಯೋಗ್ಯವಲ್ಲ. ಇದರಿಂದ ಲಿವರ್ ಮತ್ತು ಬಹು ಅಂಗಾಂಗಗಳ ವೈಫಲ್ಯವಾಗಲಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಎಚ್ಚರಿಕೆ ನೀಡಿದೆ.

ಧಾರವಾಡ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಕುಮಾರ್ ಮಾನಕರ ಹೇಳಿಕೆ ನೀಡಿದ್ದು, ಸ್ಯಾನಿಟೈಜರ್‌ದಲ್ಲಿ ಅಲ್ಕೋಹಾಲ್ ಮಾತ್ರ ಇರುವುದಿಲ್ಲ. ಇದು ಶೇ.95 ರಷ್ಟು ಇಥೈಲ್ ಅಲ್ಕೋಹಾಲ್, ಶೇ.0.125 ಹೈಡ್ರೋಜನ್ ಪೆರಾಕ್ಸೈಡ್, ಶೇ.1.45 ರಷ್ಟು ಗ್ಲಿಸರಾಲ್ ಒಳಗೊಂಡಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಇಥೆನಾಲ್ ಇರುವುದರಿಂದ ಕುಡಿಯಲು ಇದು ಯಾವುದೇ ಕಾರಣಕ್ಕೂ ಯೋಗ್ಯವಲ್ಲ.

ಇದರ ಸೇವನೆಯಿಂದ ಅನ್ನನಾಳ, ಜಠರ, ಸಣ್ಣಕರಳು, ದೊಡ್ಡಕರಳು, ಪಿತ್ತಜನಕಾಂಗ (ಲೀವರ್) ಮತ್ತು ಮೇದೋಜಿರಕ ಗ್ರಂಥಿಗಳಿಗೆ ತೀವ್ರವಾದ ಹಾನಿಯಾಗುತ್ತದೆ. ಪ್ರಾಣಹಾನಿಯಾಗುವ ಸಾಧ್ಯತೆಗಳು ಇರುತ್ತವೆ ಎಂದು ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ