ಸ್ವತಃ ಜೆಡಿಎಸ್ ಮುಂಖಡರನ್ನೇ ಹೋಮ ಹವನ ನಡೆಯುವ ಸ್ಥಳಕ್ಕೆ ಬಿಡದಂತೆ ನಡೆಸಿರುವ ಮಾಜಿ ಪ್ರಧಾನಿಯ ಧಾರ್ಮಿಕ ಕಾರ್ಯಕ್ರಮ ಹಲವು ರೀತಿಯ ರಾಜಕೀಯ ಲೆಕ್ಕಾಚಾರ ಹಾಗೂ ಚರ್ಚೆಗೆ ಕಾರಣವಾಗ್ತಿದೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕುಡನಲ್ಲಿ ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ನಡೆದ ಪೂಜೆ ಗಮನ ಸೆಳೆದಿದೆ.
ಸತತ ಐದು ಗಂಟೆ ಕಾಲ ಪೂಜೆ ಸಲ್ಲಿಸಿದ್ದರು ಹೆಚ್.ಡಿ.ದೇವೇಗೌಡರ ಕುಟುಂಬದವರು. ಸಂಕಲ್ಪ ಮಾಡಿಕೊಂಡು ಗಣಪತಿ ಹೋಮ, ರುದ್ರಯಾಗ ನಡೆಸಿದ್ದಾರೆ. ಪೂಜೆಯಲ್ಲಿ ಹೆಚ್.ಡಿ. ದೇವೇಗೌಡರು, ಸಿಎಂ ಕುಮಾರಸ್ವಾಮಿ, ಸಚಿವ ರೇವಣ್ಣ ಭಾಗಿಯಾಗಿದ್ರು.
ಹೋಮ ಹವನ ನಡೆಯುವ ಸ್ಥಳಕ್ಕೆ ಜೆಡಿಎಸ್ ಮುಂಖಡರು ಸೇರಿದಂತೆ ಸಾರ್ವಜನಿಕರು ಮಾಧ್ಯಮದವರಿಗೆ ನಿರ್ಬಂಧ ವಿಧಿಸಲಾಗಿತ್ತು.