ಸಿದ್ದರಾಮಯ್ಯಗೆ ಸಿದ್ಧಗೊಂಡಿರುವ ಮನೆಯ ವಿಶೇಷತೆ ಏನು?

ಮಂಗಳವಾರ, 24 ಜನವರಿ 2023 (11:00 IST)
ಕೋಲಾರ : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲಿರುವ ಸಿದ್ದರಾಮಯ್ಯಗೆ ಪಕ್ಕಾ ವಾಸ್ತು ಇರುವ ತೋಟದ ಮನೆಯೊಂದು ಅಂತಿಮವಾಗಿದೆ.
 
ಸಿದ್ದರಾಮಯ್ಯ ನಿರೀಕ್ಷೆ ಮಾಡಿದಂತೆ ಎಲ್ಲಾ ಸೌಲಭ್ಯಗಳಿರುವ ಮನೆಯನ್ನು ಕಾಂಗ್ರೆಸ್ ನಾಯಕರು ಅಂತಿಮ ಮಾಡಿದ್ದು, ವಿಪಕ್ಷ ನಾಯಕ ನಾಯಕ ಸಿದ್ದರಾಮಯ್ಯ ಕೂಡ ಒಪ್ಪಿಕೊಳ್ಳುವ ಮನೆ ಇದಾಗಿದೆ.

ಕೋಲಾರ ಹೊರವಲಯದ ಕೋಗಿಲಹಳ್ಳಿ ಬಳಿ ಇರುವ ಗಾಳಿ, ಬೆಳಕು ಹಾಗೂ ವಾಸ್ತು ಇರುವ ವಿಶಾಲವಾದ ತೋಟದ ಮನೆಯನ್ನು ಕಾಂಗ್ರೆಸ್ ನಾಯಕರು ಆಯ್ಕೆ ಮಾಡಿದ್ದಾರೆ.

ಈ ಮನೆಯು ಕೋಲಾರ ನಗರಸಭೆ ವಾರ್ಡ್ ನಂ.6ರಲ್ಲಿರುವ ಕೋಗಿಲಹಳ್ಳಿಯ ಶಂಕರ್ ಎಂಬುವವರ ತೋಟದ ಮನೆಯಾಗಿದೆ. ಇಲ್ಲಿ ಸಣ್ಣ ಸಭೆ, ಸಮಾರಂಭ, ಪಾರ್ಕಿಂಗ್ ಸೇರಿದಂತೆ ಸಾವಿರಾರು ಜನರು ಬಂದ್ರು ನಿಭಾಯಿಸಲು ವ್ಯವಸ್ಥೆಯಿರುವುದರಿಂದ ಈ ಬಾಡಿಗೆ ಮನೆ ಇದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ