ಹೈದರಾಬಾದ್: ಧೋನಿ ನಿಧಾನಗತಿ ಇನಿಂಗ್ಸ್ ಆಡುವುದಕ್ಕೆ ಸಾಕಷ್ಟು ಟೀಕೆಗೊಳಗಾಗುತ್ತಾರೆ. ಆದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಧೋನಿಯ ಈ ಇನಿಂಗ್ಸ್ ಭಾರತದ ಮಾನ ಕಾಪಾಡಿದೆ.
ಆಸ್ಟ್ರೇಲಿಯಾ ನೀಡಿದ 237 ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾಗೆ ಶಿಖರ್ ಧವನ್ (0) ರೂಪದಲ್ಲಿ ಆರಂಭದಲ್ಲಿಯೇ ಆಘಾತ ಸಿಕ್ಕಿತ್ತು. ಬಳಿಕ ರೋಹಿತ್ ಶರ್ಮಾ (37) ಮತ್ತು ನಾಯಕ ಕೊಹ್ಲಿ (44) ಸಣ್ಣ ಜತೆಯಾಟವಾಡಿದರೂ, ಅಂಬಟಿ ರಾಯುಡು 13 ರನ್ ಗಳಿಗೆ ಔಟಾಗುವ ಮೂಲಕ ಕುಸಿತಕ್ಕೆ ಕಾರಣರಾದರು.
ಈ ಸಂದರ್ಭದಲ್ಲಿ ಕೇದಾರ್ ಜಾಧವ್ ಜತೆಗೂಡಿದ ಧೋನಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು. ತಾವು ನಿಧಾನಗತಿಯ ಇನಿಂಗ್ಸ್ ಆಡಿದ ಧೋನಿ, ಕೇದಾರ್ ಜಾಧವ್ ಗೆ ನ್ಯಾಚುರಲ್ ಹೊಡೆತಕ್ಕೆ ಕೈ ಹಾಕಲು ಸೂಚಿಸಿದರು. ಹೀಗಾಗಿ ಜಾದವ್ 87 ಎಸೆತಗಳಲ್ಲಿ 81 ರನ್ ಗಳಿಸಿದರೆ, ಧೋನಿ 72 ಎಸೆತಗಳಲ್ಲಿ 59 ರನ್ ಗಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ 48.2 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 240 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.