ಗಾಂಧಿ ಭಾವಚಿತ್ರ ತೆಗೆಯುವ ಅವಶ್ಯಕತೆ ಏನಿತ್ತು: ಪ್ರಧಾನಿಗೆ ದೇವೇಗೌಡರ ಪ್ರಶ್ನೆ!

ಶನಿವಾರ, 14 ಜನವರಿ 2017 (13:04 IST)
ನೋಟುಗಳಲ್ಲಿನ ಮಹಾತ್ಮಾ ಗಾಂಧಿ ಭಾವಚಿತ್ರ ತೆಗೆಯದ ಪ್ರಧಾನಿ ನರೇಂದ್ರ ಮೋದಿ, ಕ್ಯಾಲೆಂಡರ್‌ನಿಂದ ಭಾವಚಿತ್ರ ತೆಗೆಯುವ ಅವಶ್ಯಕತೆ ಏನಿತ್ತು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಪ್ರಶ್ನಿಸಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದ ಖಾದಿ ವಿಲೇಜ್ ಕ್ಯಾಲೆಂಡರ್‌ನಲ್ಲಿ ಮಹಾತ್ಮಾ ಗಾಂಧೀಜಿ ಅವರ ಪೋಟೋ ಇತ್ತು. ಆದರೆ, ಪ್ರಧಾನಿ ಅವರು ಗಾಂಧಿ ಭಾವಚಿತ್ರ ಏಕೆ ತೆಗೆದರು ತಿಳಿಯುತ್ತಿಲ್ಲ. ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
 
ಕ್ಯಾಲೆಂಡರ್‌ನಿಂದ ಗಾಂಧಿ ಭಾವಚಿತ್ರ ತೆಗೆದುಹಾಕುವ ಅವಶ್ಯಕತೆ ಇರಲಿಲ್ಲ. ಕೇಂದ್ರ ಸರಕಾರ ಒಂದಿಲ್ಲೊಂದು ಸಮಸ್ಯೆಗಳನ್ನು ಹುಟ್ಟು ಹಾಕುತ್ತಲೇ ಇದೆ ಎಂದು ಕಿಡಿಕಾರಿದರು.
 
ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿ, ಒಪ್ಪಿಕೊಳ್ಳುತ್ತೇನೆ. ಈ ದೇಶಕ್ಕೆ ಎಷ್ಟು ಪ್ರಧಾನಿಗಳು ಬಂದು ಹೋಗಿಲ್ಲ?. ಅಟಲ್ ಬಿಹಾರಿ ವಾಜಪೇಯಿ ಅವರ ಹೀಗೆ ಮಾಡಿದ್ರಾ?. ಕ್ಯಾಲೆಂಡರ್‌ನಿಂದ ಮಹಾತ್ಮಾ ಗಾಂಧೀಜಿ ಅವರ ಪೋಟೋ ತೆಗೆದು ಹಾಕುವ ಅವಶ್ಯಕತೆಯೇ ಇರಲಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟರು. 
 
ಖಾದಿ ವಿಲೇಜ್ ಇಂಡಸ್ಟ್ರೀಸ್ ಕಮಿಷನ್ ಪ್ರಕಟಿಸಿರುವ 2017ನೇ ಸಾಲಿನ ಕ್ಯಾಲೆಂಡರ್ ಮತ್ತು ಡೈರಿಗಳಲ್ಲಿ ಚರಕ ನೂಲುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಚಿತ್ರದ ಬದಲು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಕಾಣಿಸಿಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ