ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಮತ್ತು ಕೂಡಲಸಂಗಮ ಪಂಚಮಸಾಲಿ ಪೀಠ ಒಗ್ಗೂಡುವಿಕೆ ವಿಚಾರದಲ್ಲಿ ಒಂದಾಗುವುದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಸಮಾಜದ ಬಹುಜನರ ಅಭಿಪ್ರಾಯವೂ ಇದೆ ಆಗಿದೆ. ನಾವು ಮಾನಸಿಕವಾಗಿ ಒಂದಾಗಿಯೇ ಇದ್ದೇವೆ. ಆದರೆ ಆಡಳಿತಾತ್ಮವಾಗಿ ಕೆಲವು ಭಿನ್ನ ಅಭಿಪ್ರಾಯಗಳಿವೆ ಎಂದು ಸ್ವಾಮೀಜಿ ಹೇಳಿದ್ದಾರೆ.
ದಾವಣಗೆರೆಯಲ್ಲಿ ಕೂಡಲಸಂಗದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ಹೇಳಿಕೆ ನೀಡಿದ್ದು, ಈ ಬಗ್ಗೆ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ಸಭೆ ನಡೆದಿವೆ. ಮುಂದೆ ಸಮಾಜದ ಹಿರಿಯರು ಕೈಗೊಳ್ಳುವ ನಿರ್ಧಾರಕ್ಕೆ ತಾವು ಬದ್ಧ. ಹಲವು ವರ್ಷಗಳಿಂದ ಎರಡು ಪೀಠಗಳ ಮಧ್ಯೆ ಭಿನ್ನಾಭಿಪ್ರಾಯವಿತ್ತು. ಮೊನ್ನೆ ಶಾಮನೂರು ಶಿವಶಂಕರಪ್ಪ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಸಮಾಜದ ರಾಜಕೀಯ ನಾಯಕರು ಹರಿಹರ ಪಂಚಮಸಾಲಿ ಮಠದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಒಂದಾಗುವುದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಎಂದ್ರು.
ಸರ್ಕಾರ ಉತ್ತರ ಕರ್ನಾಟಕ ಅಭಿವೃದ್ಧಿಗೆ ದಿಟ್ಟ ಹೆಜ್ಜೆ ಇಡಬೇಕು. ಈಗಾಗಲೇ ಸಿಎಂ ದಕ್ಷಿಣ ಕರ್ನಾಟಕದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಉತ್ತರ ಕರ್ನಾಟಕ ಭೇಟಿಗಿಂತ, ಅಲ್ಲಿಯ ಜನಗಳ ಮನೆಗಳೇ ದೇಗುಲಗಳೆಂದು ತಿಳಿಯಬೇಕಿದೆ. ಅವಾಗಾದ್ರು ಸಿಎಂ ಉತ್ತರ ಕರ್ನಾಟಕಕ್ಕೆ ಸಿಎಂ ಭೇಟಿ ನೀಡೋ ಯತ್ನ ಮಾಡಲಿ ಎಂದು ದಾವಣಗೆರೆಯಲ್ಲಿ ಜಯಮೃತ್ಯುಂಜಯ ಶ್ರೀ ತಿಳಿಸಿದರು.