ಸದನ ನಡೆಯುವಾಗ ಗಲಾಟೆ ಮಾಡಿದರೆ ನಾವೇನು ಮಾಡೋಣ?: ಸಿಎಂ ಸಿದ್ಧರಾಮಯ್ಯ ಪ್ರಶ್ನೆ

ಬುಧವಾರ, 22 ಮಾರ್ಚ್ 2017 (12:29 IST)
ಬೆಂಗಳೂರು: ಸದನದಲ್ಲಿ ಹೀಗೆ ಗದ್ದಲ ಎಬ್ಬಿಸುತ್ತಿದ್ದರೆ, ನಾವು ಅಂತಲ್ಲ, ಯಾವುದೇ ಸರ್ಕಾರವೂ ಯಾವ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ… ಹೀಗೆಂದು ಸಿಎಂ ಸಿದ್ಧರಾಮಯ್ಯ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

 

ನಾವು ಬಂದ ಮೇಲೆ ಅವರ ವೇತನವನ್ನು 3400 ರೂ. ಗೆ ಹೆಚ್ಚಿಸಿದ್ದೇವೆ. ನೀವು ಹೀಗೆ ಗಲಾಟೆ ಮಾಡಿಕೊಂಡೇ ಇದ್ದರೆ, ನಾವೇನೂ ತೀರ್ಮಾನ ಕೈಗೊಳ್ಳಲು ಸಾಧ್ಯ? ಎಂದು ವಿಪಕ್ಷಗಳಿಗೆ ಸಿಎಂ ಪ್ರಶ್ನಿಸಿದರು.

 
ಅಲ್ಲದೆ, ಪ್ರತಿಭಟನೆಕಾರರ ಬೇಡಿಕೆಗಳನ್ನು ಪೂರೈಸುವುದಕ್ಕೆ ಕ್ರಮ ಕೈಗೊಳ್ಳುತ್ತೇವೆ. ಅದಕ್ಕೆ ಸ್ವಲ್ಪ ಸಮಯ ಬೇಕು. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯಿರಿ. ಈ ಸದನದ ಮೂಲಕ ಪ್ರತಿಭಟನೆ ಕೈಬಿಡುವಂತೆ ಕಾರ್ಯಕರ್ತರ ಬಳಿ ಬೇಡಿಕೊಳ್ಳುತ್ತೇನೆ ಎಂದು ಸಿಎಂ ಮನವಿ ಮಾಡಿದರು.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ