ರೂಂಗೆ ಬೇಗ ಬಾ..! ಪತ್ನಿಗೆ ರಿವಾಬಗೆ ಪಬ್ಲಿಕ್ ಆಗಿ ಆರ್ಡರ್ ಕೊಟ್ಟ ರವೀಂದ್ರ ಜಡೇಜಾ
ರವೀಂದ್ರ ಜಡೇಜಾ ಪತ್ನಿ ರಿವಾಬ ಗುಜರಾತ್ ನ ಜಾಮ್ನಾನಗರದ ಬಿಜೆಪಿ ಶಾಸಕಿ. ಸಾಮಾನ್ಯವಾಗಿ ರಿವಾಬ ಸಾಂಪ್ರದಾಯಿಕ ಡ್ರೆಸ್ ನಲ್ಲೇ ಕಾಣಿಸಿಕೊಳ್ಳುತ್ತಾರೆ. ಆದರೆ ಅಪರೂಪಕ್ಕೆ ಟಿ-ಶರ್ಟ್ ತೊಟ್ಟುಕೊಂಡಿರುವ ಫೋಟೋ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು.
ಪತಿ ರವೀಂದ್ರ ಜಡೇಜಾ ಫೋಟೋ ಹಿನ್ನಲೆಯಲ್ಲಿತ್ತು. ಅವರು ಧರಿಸಿದ್ದ ಟಿ-ಶರ್ಟ್ ನಲ್ಲಿ ಹುಕುಂ (ಆರ್ಡರ್) ಎಂದು ಬರೆದಿತ್ತು. ಇದನ್ನು ನೋಡಿದ ರವೀಂದ್ರ ಜಡೇಜಾ ನನ್ನ ಆರ್ಡರ್, ಬೇಗ ರೂಂಗೆ ಬಾ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಅವರ ಕಾಮೆಂಟ್ ನೋಡಿ ನೆಟ್ಟಿಗರು ಗಂಡ-ಹೆಂಡತಿಯನ್ನು ಇನ್ನಿಲ್ಲದಂತೆ ಕಾಲೆಳೆದಿದ್ದಾರೆ.
ಸ್ವಲ್ಪ ಸಂಯಮದಿಂದಿರಿ ಜಡ್ಡು ಎಂದು ಓರ್ವ ನೆಟ್ಟಿಗ ಕಾಮೆಂಟ್ ಮಾಡಿದ್ದರೆ ಮತ್ತೋರ್ವ ಜಡೇಜಾರ ದೊಡ್ಡ ಸಪೋರ್ಟ್ ಸಿಸ್ಟಂ ರಿವಾಬ ಎಂದಿದ್ದಾರೆ. ಪತಿ-ಪತ್ನಿಯ ಸೋಷಿಯಲ್ ಮೀಡಿಯಾ ಕಾಮೆಂಟ್ ನೆಟ್ಟಿಗರಿಗೆ ತಮಾಷೆ ಮಾಡಲು ಕಾರಣ ಸಿಕ್ಕಂತಾಗಿದೆ.