ದೇವಸ್ಥಾನಕ್ಕೆ ಬಂದ ಮಹಿಳೆ ಸೀರೆಗೆ ಅಕಸ್ಮಿಕ ಬೆಂಕಿ: ಸಿಸಿಟಿವಿಯಲ್ಲಿ ದಾಖಲು

ಗುರುವಾರ, 20 ಜೂನ್ 2019 (19:52 IST)
ದೇವಾಲಯಕ್ಕೆ ಬಂದ ಮಹಿಳೆಯ ಸೀರೆಗೆ ಅಕಸ್ಮಿಕವಾಗಿ ಬೆಂಕಿ ತಗುಲಿದ ದೃಶ್ಯದ ವಿಡಿಯೋ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದೇವರಿಗೆ ವಂದಿಸಿ ಮಹಿಳೆ ಮರಳುತ್ತಿರುವಾಗ ಸೀರೆಗೆ ಬೆಂಕಿ ತಗುಲಿರುವುದು ಗಮನಕ್ಕೆ ಬಂದಿದೆ. ಆದರೆ, ರೇಷ್ಮೆ ಸೀರೆಯಾಗಿದ್ದರಿಂದ ಬೆಂಕಿಯ ವೇಗ ಹೆಚ್ಚಾಗಿದೆ. ಬೆಂಕಿ ತಗುಲುತ್ತಿದ್ದಂತೆ ಜೋರಾಗಿ ಕೂಗಿದೆ ಮಹಿಳೆ ಅಲ್ಲಿಯೇ ಪಕ್ಕದಲ್ಲಿದ್ದ ಕೋಣೆಗೆ ತೆರಳಿ ಬೆಂಕಿ ಆರಿಸುವ ಪ್ರಯತ್ನ ಮಾಡಿದ್ದಾಳೆ. ನೆರೆಹೊರೆಯವರು ಕೂಡಾ ನೀರು ತಂದು ಬೆಂಕಿ ಆರಿಸುವ ಪ್ರಯತ್ನ ಮಾಡಿದ್ದಾರೆ..
 
ಸುದೀರ್ಘ ಹೋರಾಟದ ನಂತರ ಮಹಿಳೆಯ ಸೀರೆಗೆ ತಗುಲಿದ್ದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
 
ಮಹಿಳೆಯ ಸೀರೆಗೆ ಹತ್ತಿದ ಬೆಂಕಿ ದೇಹದ ತುಂಬಾ ವ್ಯಾಪಿಸಿದ್ದರಿಂದ ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಕೂಡಲೇ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ