ಗಣೇಶ ಹಬ್ಬ ಮುಗಿದರೂ ಗೃಹಲಕ್ಷ್ಮಿ ಹಣದ ಸುಳಿವಿಲ್ಲ: ಇಲ್ಲಿದೆ ಹೊಸ ಸಮಾಚಾರ

Krishnaveni K

ಶುಕ್ರವಾರ, 5 ಸೆಪ್ಟಂಬರ್ 2025 (09:03 IST)

ಬೆಂಗಳೂರು: ಕರ್ನಾಟಕದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಹಣ ಜಮೆಯಾಗದೇ ತುಂಬಾ ಸಮಯವಾಗಿದೆ. ಗಣೇಶ ಹಬ್ಬ ಮುಗಿದರೂ ಹಣ ಬಂದಿಲ್ಲ ಎನ್ನುವವರಿಗೆ ಇಲ್ಲಿದೆ ಹೊಸ ಸಮಾಚಾರ.

ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಪ್ರಕಾರ ಪ್ರತೀ ತಿಂಗಳು ಮನೆಯ ಯಜಮಾನಿಯ ಖಾತೆಗೆ 2,000 ರೂ. ಹಣ ಸಂದಾಯವಾಗಬೇಕು. ಹೀಗೆ ಹೇಳಿಕೊಂಡು ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ಆದರೆ ಈಗ ಪ್ರತೀ ತಿಂಗಳು ಹಣವಂತೂ ಬರುತ್ತಿಲ್ಲ. ಕೇಳಿದಾಗಲೆಲ್ಲಾ ಸರ್ಕಾರ, ಸಚಿವರು ತಾಂತ್ರಿಕ ದೋಷ, ಇನ್ಯಾವುದೋ ನೆಪಗಳನ್ನು ಹೇಳುತ್ತಿದ್ದಾರೆ.

ಇತ್ತ ಮಹಿಳೆಯರು ಪ್ರತೀ ತಿಂಗಳು ಹಣ ಬರುತ್ತಿಲ್ಲ ಎಂದು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಮೊದಲು ಗಣೇಶ ಹಬ್ಬದ ಸಂದರ್ಭದಲ್ಲಿ ಹಣ ಸಂದಾಯವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಹಬ್ಬ ಮಾಡಲು ಹಣ ಬಂದಿರಲಿಲ್ಲ.

ಇದೀಗ ಗಣೇಶ ಹಬ್ಬ ಮುಗಿದರೂ ಹಣ ಬಂದಿಲ್ಲ. ಈಗಿನ ಮಾಹಿತಿ ಪ್ರಕಾರ ಇದೇ ವಾರದ ಅಂತ್ಯಕ್ಕೆ ಎರಡು ತಿಂಗಳ ಕಂತಿನ ಬಾಬ್ತು 4,000 ರೂ.ಗಳನ್ನು ಒಟ್ಟಿಗೇ ಹಾಕಲಾಗುತ್ತದಂತೆ. ಆದರೆ ಹಾಕಿದ ಮೇಲೆಯೇ ಧೈರ್ಯ ಎನ್ನುತ್ತಿದ್ದಾರೆ ಮಹಿಳೆಯರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ