ಧರ್ಮಸ್ಥಳ ಕೇಸ್: ಬುರುಡೆ ಕೇಸ್ ನ ಬುಡ ಅರಿಯಲು ವಿಠಲ ಗೌಡ, ಜಯಂತ್ ಮೊಬೈಲ್ ವಶಕ್ಕೆ

Krishnaveni K

ಬುಧವಾರ, 10 ಸೆಪ್ಟಂಬರ್ 2025 (10:05 IST)
ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಕೇಸ್ ಬೆನ್ನು ಹತ್ತಿರುವ ಎಸ್ಐಟಿ ಅಧಿಕಾರಿಗಳು ಈಗ ಸೌಜನ್ಯ ಮಾವ ವಿಠಲ ಗೌಡ, ಜಯಂತ್ ಟಿ ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಬುರುಡೆ ತಂದಿದ್ದ ಚಿನ್ನಯ್ಯ ಬಾಯ್ಬಿಟ್ಟ ಬಳಿಕ ಇಡೀ ಗ್ಯಾಂಗ್ ಗೆ ಸಂಕಷ್ಟ ಎದುರಾಗಿದೆ. ತನಗೆ ಬುರುಡೆ ತಂದುಕೊಟ್ಟಿದ್ದು ಯಾರು ಎಂಬ ಬಗ್ಗೆ ಚಿನ್ನಯ್ಯ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ. ಈತನ ವಿಚಾರಣೆ ವೇಳೆ ಜಯಂತ್, ವಿಠಲ ಗೌಡ, ಗಿರೀಶ್ ಮಟ್ಟೆಣ್ಣನವರ್ ಪಾತ್ರಗಳ ಬಗ್ಗೆ ಅಧಿಕಾರಿಗಳ ತಿಳಿದುಬಂದಿದೆ.

ಬುರುಡೆ ತಂದುಕೊಟ್ಟಿದ್ದ ವಿಠಲ ಗೌಡ, ಜಯಂತ್ ಮೊಬೈಲ್ ಗಳನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇದರಲ್ಲಿ ಯಾರು ಯಾರಿಗೆ ಕರೆ ಮಾಡಿದ್ದರು. ಬುರುಡೆ ತರಲು ಪ್ಲ್ಯಾನ್ ಮಾಡಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತಿದೆ.

ಸದ್ಯಕ್ಕೆ ಚಿನ್ನಯ್ಯನನ್ನು ಮಾತ್ರ ಅರೆಸ್ಟ್ ಮಾಡಲಾಗಿದೆ. ಜಯಂತ್, ವಿಠಲ ಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಬುರುಡೆ ತಂದುಕೊಟ್ಟಿದ್ದ ಆರೋಪ ಹೊತ್ತಿರುವ ವಿಠಲಗೌಡನನ್ನು ಅರೆಸ್ಟ್ ಮಾಡಬಹುದು ಎನ್ನಲಾಗಿತ್ತು. ಆದರೆ ಇದುವರೆಗೆ ಅರೆಸ್ಟ್ ಮಾಡಲಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ