ವಿಧಾನಸಭೆ ಕಾರ್ಯದರ್ಶಿ ಸ್ಥಾನದಿಂದ ಅಮಾನತ್ ಪ್ರಕರಣ ವಿಚಾರಣೆ ಎಲ್ಲಿಗೆ ಬಂತು?
ವಿಧಾನಸಭೆಯ ಕಾರ್ಯದರ್ಶಿ ಸ್ಥಾನದಿಂದ ಅಮಾನತು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪ್ರಕರಣದ ವಿಚಾರಣೆ ನಡೆಯಿತು. ಅಮಾನತು ಆದೇಶ ಪ್ರಶ್ನಿಸಿ ಎಸ್.ಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠದಿಂದ ವಿಚಾರಣೆ ನಡೆಸಲಾಯಿತು.
ಎಸ್.ಮೂರ್ತಿ ಪರವಾಗಿ ಹಿರಿಯ ವಕೀಲ ಬಿ.ವಿ.ಆಚಾರ್ಯ ವಾದ ಮಂಡನೆ ಮಾಡಿದರು. ಅರ್ಜಿದಾರರನ್ನು ವಿಚಾರಣೆ ನಡೆಸದೆ ಅಮಾನತು ಮಾಡಿರುವುದು ಕಾನೂನು ಬಾಹಿರ ಎಂದರು. ಹೀಗಾಗಿ ಸ್ಪೀಕರ್ ಆದೇಶ ರದ್ದುಗೊಳಿಸಲು ಮನವಿ ಮಾಡಿದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರ, ಮೇಲ್ನೋಟಕ್ಕೆ ಅಪರಾಧ ಮಾಡಿರುವುದು ಸಾಬೀತಾಗಿದೆ.
ಹೀಗಾಗಿ ಮೂರ್ತಿಯನ್ನು ಅಮಾನತು ಮಾಡಲಾಗಿದೆ ಎಂದು ವಾದಿಸಿತು. ವಾದ ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿತು ಹೈಕೋರ್ಟ್.