ನೂರಾರು ಲೀಟರ್ ಕಲಬೆರಕೆ ಸೇಂದಿ ಯಾರ ಮನೆಯಲ್ಲಿತ್ತು?

ಮಂಗಳವಾರ, 31 ಡಿಸೆಂಬರ್ 2019 (16:53 IST)
ಅಕ್ರಮವಾಗಿ ಸಂಗ್ರಹಮಾಡಿ ಮಾರಾಟಕ್ಕೆ ಇಟ್ಟಿದ್ದ ನೂರಾರು ಲೀಟರ್ ಕಲಬೆರಕೆ ಸೇಂದಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮದನಾ ಹಳ್ಳಿಯಲ್ಲಿ ಆನಂದಮ್ಮ ಬಸವರಾಜ್ ಕಲಾಲ್ ಮನೆಯ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿ ವೇಳೆ 100 ಲೀಟರ್ ಕಲಬೆರಕೆ ಸೇಂದಿ ಹಾಗೂ 1 ಕೆಜಿ ಸಿಹೆಚ್ ಪೌಡರ್ ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಆನಂದಮ್ಮ ಕಲಾಲ್ ವಿರುದ್ಧ ಅಬಕಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ