ಬನ್ನೇರುಘಟ್ಟ ಜೈವಿಕ ಉದ್ಯಾನವನದ ಬಿಳಿ ಹುಲಿ ಸಾವು

ಗುರುವಾರ, 21 ಸೆಪ್ಟಂಬರ್ 2017 (11:43 IST)
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಬೆಂಗಾಲ್ ಟೈಗರ್ ಜೊತೆಗಿನ ಕಾದಾಟದಲ್ಲಿ ಗಾಯಗೊಂಡಿದ್ದ ಬಿಳಿ ಹುಲಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ.   

ಕಳೆದ ಮೂರು ದಿನಗಳ ಹಿಂದೆ ಜೈವಿಕ ಉದ್ಯಾನವನದ ಸಫಾರಿ ಪಾರ್ಕ್`ನಲ್ಲಿ ಬೆಂಗಾಳಿ ಟೈಗರ್ ಮತ್ತು ಬಿಳಿ ಟೈಗರ್ ನಡುವೆ ಕಾದಾಟ ನಡೆದಿತ್ತು.  ಬೆಂಗಾಳಿ ಟೈಗರ್ ಮತ್ತು ಬಿಳಿ ಟೈಗರ್ ಬೇರೆ ಬೇರೆ ಫೆನ್ಸಿಂಗ್`ಗಳಲ್ಲಿ ಇರುತ್ತಿದ್ದವು. ಆದರೆ, ಸಫಾರಿ ವೇಳೆ ನೌಕರನ ಅನನುಭವದಿಂದ ಬಿಳಿ ಹುಲಿ, ಬೆಂಗಾಳಿ ಹುಲಿಗಳಿದ್ದ ಪ್ರದೇಶಕ್ಕೆ ಹೋಗಿತ್ತು. ಈ ಸಂದರ್ಭ ಎರಡು ಬೆಂಗಾಳಿ ಹುಲಿಗಳು ಬಿಳಿ ಹುಲಿ ಮೇಲೆ ಎರಗಿದ್ದವು. ಒಂದು ಗಂಟೆ ನಡೆದ ಕಾಳಗದಲ್ಲಿ ಬಿಳಿ ಹುಲಿ ಬೆನ್ನು ಹುರಿ ಮತ್ತು ಕುತ್ತಿಗೆಗೆ ಗಂಭೀರ ಗಾಯವಾಗಿತ್ತು.

ಮೂರು ದಿನಗಳಿಂದ ಹುಲಿಗೆ ಚಿಕಿತ್ಸೆ ನೀಡಲಾಗಿದ್ದರೂ ಚಿಕಿತ್ಸೆ ಫಲಿಸದೇ ಹುಲಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಕಾಡಿನಲ್ಲಿ ತೋಡಿದ್ದ ಗುಂಡಿಗೆ ಬಿದ್ದು, ಚಿರತೆಯೊಂದು ಸಾವನ್ನಪ್ಪಿದ್ದು, ಇದೀಗ, ಹುಲಿಯೊಂದು ಮೃತಪಟ್ಟಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ