ಮಾತೆ ಮಹಾದೇವಿಗೆ ತಿಂಗಳ ಆಯುಷ್ಯ ಧಾರೆ ಎರೆದವರಾರು?

ಗುರುವಾರ, 14 ಮಾರ್ಚ್ 2019 (13:45 IST)
ಅನಾರೋಗ್ಯಕ್ಕೆ ಒಳಗಾಗಿರುವ ಮಾತೆ ಮಹಾದೇವಿಯವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.
ಮಾತೆ ಮಹಾದೇವಿ ಅನಾರೋಗ್ಯ ಹಿನ್ನೆಲೆಯಲ್ಲಿ ಬೀದರ್ ನಗರದ ಬಸವ ಮಂಟಪದಲ್ಲಿ ಮಾತಾಜಿ ಗಾಗಿ ಪ್ರಾರ್ಥನೆ ಸಲ್ಲಿಕೆ ಮಾಡಲಾಯಿತು.

ಸಾವಿರಾರು ಮಾತಾಜಿ ಭಕ್ತರಿಂದ ಆರೋಗ್ಯ ಸುಧಾರಣೆಗಾಗಿ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ವಿಶೇಷ ಪೂಜೆ ಪಾರ್ಥನೆ ಸಲ್ಲಿಸಿ ಒಂದು ತಿಂಗಳು ಆಯಸ್ಸು ಧಾರೆ ಎಳೆದ ಭಕ್ತರು ತಮ್ಮ ಭಕ್ತಿಯನ್ನು ಮೆರೆದರು.

ಭಕ್ತರ ತಿಂಗಳ ಆಯಸ್ಸನ್ನು ಮಾತೆ ಮಹಾದೇವಿ ಅವರಿರೆ ನೀಡಲಿ ಎಂದು ಭಕ್ತರು ದೇವರಲ್ಲಿ ಪಾರ್ಥನೆ ಮಾಡಿದರು.

ಮಾತೆ ಮಹಾದೇವಿ ಅನಾರೋಗ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಮಣಿಪಾಲ್ ಆಸ್ಪತ್ರೆಗೆ ಗೃಹ ಸಚಿವ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಅಶೋಕ್ ಖೇಣಿ, ನಿಜಗುಣಾನಂದ ಸ್ವಾಮಿಜಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ