ಮಠದಲ್ಲಿ ಸಿಕ್ಕ ಮಗು ಯಾರದ್ದು..?
ಮುರುಘಾ ಮಠದಲ್ಲಿ ಮಗು ಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಗು ನಾಲ್ಕೂವರೆ ವರ್ಷದ ಹಿಂದೆ ಮಠದ ಮುಂದಿನ ಕಾಂಪೌಂಡ್ ನಲ್ಲಿ ಸಿಕ್ಕಿತ್ತು ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಮಠದ ಮುಂದಿನ ಕಾಂಪೌಂಡ್ ನಲ್ಲಿ ನಾಲ್ಕೂವರೆ ವರ್ಷದ ಹಿಂದೆ ಈ ಮಗು ಸಿಕ್ಕಿತ್ತು ಎಂದು ಮಠದ ಬಳಿಯ ಹೋಟೆಲ್ ನ ಮಹಿಳೆಯೊಬ್ಬರು ಮಾಹಿತಿ ನೀಡಿದ್ದು, ಫೈರೋಜಾ ಎಂಬ ಮಹಿಳೆ ನಾಲ್ಕುವರೆ ವರ್ಷದ ಹಿಂದಿನ ಸತ್ಯವನ್ನು ಬಿಚ್ಚಿಟ್ಟಿದ್ದು, ಮಗು ಹುಟ್ಟಿದ ನಾಲ್ಕೈದು ದಿನಗಳಲ್ಲಿ ಮಠದ ಮುಂದೆ ಕಾಂಪೌಂಡ್ ಪಕ್ಕದಲ್ಲಿ ಸಿಕ್ಕಿತ್ತು. ಈ ವೇಳೆ ಆ ಮಗುವಿನ ಬಳಿ ಪತ್ರವಿತ್ತು. ಅದರಲ್ಲಿ ದಯವಿಟ್ಟು ಮಗುವನ್ನು ಮಠಕ್ಕೆ ಸೇರಿಸಬೇಕು ಎಂದು ಬರೆಯಲಾಗಿತ್ತು. ಹೀಗಾಗಿ ಸ್ವಾಮೀಜಿ, ಮಠದ ಸಿಬ್ಬಂದಿಯನ್ನು ಇಲ್ಲಿ ಕಳುಹಿಸಿ, ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ. ಸ್ಥಳೀಯರು ಮಗುವನ್ನು ಕೊಡುವಂತೆ ಮಠಕ್ಕೆ ಹೋಗಿ ಕೇಳಿದ್ದಾರೆ. ಆಗ ಸ್ವಾಮೀಜಿ ಸ್ಥಳೀಯರ ಹತ್ತಿರ ಆಸ್ತಿ ಏನಾದರೂ ಇದ್ದರೇ ಅದನ್ನು ಮಗುವಿನ ಹೆಸರಿಗೆ ಬರೆಸಿ, ಆಗ ಮಗುವನ್ನು ಕೊಡುತ್ತೇವೆ ಎಂದು ತಿಳಿಸಿದ್ದರು ಎಂದು ಮಹಿಳೆ ಮಾಹಿತಿ ನೀಡಿದ್ದರು.