Dharmasthala case: ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಅರುಣ್ ಕುಮಾರ್ ಸಲಹೆ ಸ್ವೀಕರಿಸಿದ್ದರೆ ಅಗೆಯುವ ಕೆಲವೇ ಆಗ್ತಿರಲಿಲ್ಲ
ಒಂದು ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸಲಹೆ ಮೇರೆಗೆ ಅಂದೇ ಮುಸುಕುಧಾರಿ ವ್ಯಕ್ತಿಗೆ ಮಂಪರು ಪರೀಕ್ಷೆ ನಡೆಸಿದ್ದರೆ ಇಷ್ಟೆಲ್ಲಾ ಅವಾಂತರಗಳು ನಡೆಯುತ್ತಲೇ ಇರಲಿಲ್ಲ ಎನ್ನಬಹುದು.
ಆಗ ಸೌಜನ್ಯ ಪರ ಹೋರಾಟಗಾರರು ಮಂಪರು ಪರೀಕ್ಷೆ ನಡೆಸಿ ಸಾಕ್ಷ್ಯ ನಾಶ ಮಾಡುವ ಯತ್ನ ಎಂದು ವಿರೋಧ ವ್ಯಕ್ತಪಡಿಸಿದರು. ಸರ್ಕಾರವೂ ಅದೇ ಸಮಯಕ್ಕೆ ಎಸ್ಐಟಿ ರಚನೆ ಮಾಡಿ ತನಿಖೆಗೆ ಆದೇಶಿಸಿತ್ತು. ಇದರ ನಡುವೆ ಆತ ಮೊದಲು ಸಾಕ್ಷ್ಯಕ್ಕಾಗಿ ಬುರುಡೆ ಎಲ್ಲಿಂದ ತಂದಿದ್ದ ಎಂಬುದನ್ನೂ ಪೊಲೀಸರು ತನಿಖೆ ಮಾಡಲಿಲ್ಲ. ಆದರೆ ಈಗ ಆತ ಹೇಳಿದಂತೆ ಶವ ಸಿಕ್ಕದೇ ಹೋದಾಗ ಪೊಲೀಸರಿಗೆ ಅನುಮಾನವಾಗಿ ಆತನನ್ನೇ ತನಿಖೆ ಮಾಡಿದಾಗ ನಿಜಾಂಶ ಬಯಲಾಗಿದೆ.