ಬೆಂಗಳೂರು: ಧರ್ಮಸ್ಥಳದಲ್ಲಿ ಮಾಸ್ಕ್ ಮ್ಯಾನ್ ಕತೆ ಬಯಲಾಗುತ್ತಿದ್ದಂತೇ ಬಿಜೆಪಿ ನಾಯಕ ಸಿಟಿ ರವಿ ಸಂತಸ ವ್ಯಕ್ತಪಡಿಸಿದ್ದಾರೆ. ಕೊನೆಗೂ ಅಧರ್ಮದ ಕತೆಗಳು ಬಯಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸತ್ಯ ಮೇವ ಜಯತೇ.. ಮೊನ್ನೆ ಮಹೇಶ್ ತಿಮರೋಡಿ, ನಿನ್ನೆ ಸುಜಾತ ಭಟ್, ಇಂದು ಬುರುಡೆ ಕಥದಾರಿ ಮಾಸ್ಕ್ ಮೆನ್ ಅಂತೆ ಕಂತೆಗಳ ಅಧರ್ಮದ ಕಥೆಗಳು ಕೊನೆಗೂ ಬಯಲಾಗುತ್ತಿವೆ..
ನ್ಯಾಯದ ಹೆಸರಿನಲ್ಲಿ ಅನ್ಯಾಯವನ್ನು ಮೆರೆಸಲು ಹೊರಟ ಪೂರ್ವ ನಿಯೋಜಿತ ಷಡ್ಯಂತರ ಸಾಬೀತಾಗಲು ಇನ್ನೆಷ್ಟು ಸಾಕ್ಷಿಗಳು ಬೇಕು..?
ಹಿಂದೂ ಧಾರ್ಮಿಕ ಶ್ರದ್ಧಾಭಾವದ ಮೇಲಾದ ದಾಳಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಅಕ್ಷರದಾಸೋಹ, ಅನ್ನದಾಸೋಹ, ಆರೋಗ್ಯ ಭಾಗ್ಯವನ್ನು ಸರ್ವ ಸಮಾನಭಾವದಲ್ಲಿ ಹಂಚಿದ ಧರ್ಮಭೂಮಿ ಧರ್ಮಸ್ಥಳದಲ್ಲಿ ಸತ್ಯವೇ ಗೆಲ್ಲುತ್ತದೆ. ಅಪಪ್ರಚಾರ,ಅಧರ್ಮ ಸೋಲುತ್ತಿದೆ. ಧರ್ಮಭೂಮಿಯಲ್ಲಿ ಧರ್ಮದ ಗೆಲುವು ಪ್ರಾರಂಭವಾಗಿದೆ ಎಂದಿದ್ದಾರೆ.