ಬಿಜೆಪಿ ಶಾಸಕ ರಾಜು ಕಾಗೆ ವಿರುದ್ಧದ ಗೂಂಡಾಗಿರಿ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ್ ಪೂಜಾರಿ, ಇಷ್ಟೆಲ್ಲಾ ಗಲಾಟೆ ನಡೆದ್ರೂ, ಶಾಸಕನ ಬಂಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಕೈಗೊಂಡಿಲ್ಲ. ಬಿಜೆಪಿ ಶಾಸಕರೆಂದರೇ ಸಿಎಂಗೆ ಭಯಾನಾ? ಎಂದು ಪ್ರಶ್ನಿಸಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಉಗಾರ ಕ್ಷೇತ್ರದ ಬಿಜೆಪಿ ಶಾಸಕನ ಪುತ್ರಿ ಹಾಗೂ ಗ್ಯಾಂಗ್ ಗೂಂಡಾವರ್ತನೆ ತೋರಿದ್ದಾರೆ. ಆದರೂ, ಅವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಸಿಎಂ ಸಿದ್ದರಾಮಯ್ಯ ಏನು ಗಾಡ ನಿದ್ರೆಯಲ್ಲಿದ್ದಾರಾ?. ಗೃಹ ಸಚಿವ ಡಾ.ಜಿ.ಪರಮೇಶ್ವರ್‌ಗೆ ಪ್ರಕರಣ ನಿಭಾಯಿಸಲು ಸಾಧ್ಯವಾಗುತ್ತಿಲ್ವಾ? ಎಂದು ಕಿಡಿಕಾರಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಅವರ ರೌಡಿ ಗ್ಯಾಂಗ್, ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದ ಕಾಂಗ್ರೆಸ್ ನಾಯಕ ವಿವೇಕ ಶೆಟ್ಟಿ ಮನೆಗೆ ನುಗ್ಗಿ ಮಹಿಳೆ ಮಕ್ಕಳು ಎನ್ನುವುದನ್ನು ನೋಡದೆ ಅಟ್ಟಹಾಸ ಮೆರೆದಿದ್ದು, ಈ ಭೀಭತ್ಸ ಕೃತ್ಯದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.