ನವದೆಹಲಿ: ಪಹಲ್ಗಾಮ್ ನಲ್ಲಿ ಅಮಾಯಕರ ಪ್ರಾಣವನ್ನು ಉಗ್ರರು ತೆಗೆದ ಬೆನ್ನಲ್ಲೇ ಭಾರತ ಆಕ್ರೋಶಗೊಂಡಿದ್ದು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಇದರ ಬೆನ್ನಲ್ಲೇ ಇಸ್ರೇಲ್ ಮತ್ತು ಅಮೆರಿಕಾ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿದಿವೆ. ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ಬಳಿಕ ಭಾರತ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಹೊಡೆತ ನೀಡಿದೆ. ವೀಸಾ ರದ್ದು, ಸಿಂಧೂ ನದಿ ಒಪ್ಪಂದ ಮುರಿದುಕೊಂಡಿದೆ. ಅತ್ತ ಪಾಕಿಸ್ತಾನವೂ ಶಿಮ್ಲಾ ಒಪ್ಪಂದವನ್ನು ಮುರಿದುಕೊಂಡಿದೆ.
ಇದೀಗ ಗಡಿಭಾಗದಲ್ಲಿ ಎರಡೂ ದೇಶಗಳು ಯುದ್ಧ ವಿಮಾನಗಳು, ಕ್ಷಿಪಣಿ ಪ್ರಯೋಗ ಮತ್ತು ಸೈನಿಕರ ನಿಯೋಜನೆ ಮಾಡುತ್ತಿದೆ. ನಿನ್ನೆ ರಾತ್ರಿಯಿಂದ ಪಾಕಿಸ್ತಾನ ಪಡೆಗಳು ತಾವಾಗಿಯೇ ಗುಂಡಿನ ದಾಳಿಗೆ ಮುಂದಾಗಿದ್ದಾರೆ. ಇದಕ್ಕೆ ಭಾರತೀಯ ಸೇನೆಯೂ ತಕ್ಕ ಉತ್ತರ ನೀಡಿದೆ.
ಇದರ ನಡುವೆ ಸೂರತ್ ನ ವಾಯುನೆಲೆಯಲ್ಲಿ ಇಸ್ರೇಲ್ ನ ಅತ್ಯಾಧುನಿಕ ಯುದ್ಧ ವಿಮಾನ ಬಂದು ನಿಂತಿತ್ತು. ಇದರ ಬೆನ್ನಲ್ಲೇ ಈಗ ಅಮೆರಿಕಾ ಯುದ್ಧವಿಮಾನವೂ ಸೂರತ್ ಗೆ ಬಂದಿಳಿದಿದೆ. ನಿನ್ನೆಯೇ ಅರಬ್ಬೀ ಸಮುದ್ರ ಗಡಿಯಲ್ಲಿ ಭಾರತ ತನ್ನ ನೌಕಾ ಸೇನೆಯ ಐಎನ್ಎಸ್ ಯುದ್ಧನೌಕೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿತ್ತು.
ಈ ಬೆಳವಣಿಗೆ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿ ಭಾರತ ಏಕಾಂಗಿಯಾಗಿ ಅಲ್ಲ, ತನ್ನ ಮಿತ್ರರಾಷ್ಟ್ರಗಳ ಸಹಾಯದೊಂದಿಗೇ ಪಾಕಿಸ್ತಾನಕ್ಕೆ ಪೆಟ್ಟು ನೀಡಲು ಮುಂದಾಗಿದೆಯೇ ಎಂಬ ಅನುಮಾನ ಮೂಡಿದೆ.