ಬೆಂಗಳೂರಲ್ಲಿ ಇದ್ದಕ್ಕಿದ್ದ ಹಾಗೆ ಕೊತ್ತಂಬರಿ ಸೊಪ್ಪು ಬೆಲೆ ಗಗನಕ್ಕೇರಿದ್ದು ಹೇಗೆ ಗೊತ್ತಾ?!
ವಾರದ ಹಿಂದೆ ಒಂದು ಕಟ್ಟು ಕೊತ್ತಂಬರಿ ಸೊಪ್ಪು ಬೆಲೆ 15 ರಿಂದ 20 ರೂ. ಇತ್ತು. ಆದರೆ ಈಗ ಇದ್ದಕ್ಕಿದ್ದ ಹಾಗೆ ಬೆಲೆ ಏರಿಕೆಯಾಗಿದ್ದು, 40 ರಿಂದ 50 ರೂ.ಗೆ ತಲುಪಿದೆ.
ಕೋಲಾರ, ಆನೇಕಲ್ ನಲ್ಲಿ ಕೊತ್ತಂಬರಿ ಸೊಪ್ಪು ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ ಇಲ್ಲಿ ಅಕಾಲಿಕ ಮಳೆಯಾಗಿರುವುದರಿಂದ ಕೊತ್ತಂಬರಿ ಸೊಪ್ಪಿನ ಬೆಳೆಗೆ ಹಾನಿಯಾಗಿದೆ. ಇದರಿಂದ ಪೂರೈಕೆ ಕಡಿಮೆಯಾಗಿದ್ದು ಬೆಲೆ ಏರಿಕೆಯಾಗಿದ್ದು, ಬಹುಶಃ ಇದು ಮುಂದಿನ ಎರಡು ವಾರಗಳ ಹೀಗೆಯೇ ಮುಂದುವರಿಯುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.