ತೈಲ ಬೆಲೆ ನಂತರ ರೂಪಾಯಿ ಕುಸಿತಕ್ಕೂ ಯೋಜನೆ ರೂಪಿಸಿದೆಯಂತೆ ಕೇಂದ್ರ
ಭಾನುವಾರ, 7 ಅಕ್ಟೋಬರ್ 2018 (08:35 IST)
ನವದೆಹಲಿ: ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸುಂಕ ಕಡಿತಗೊಳಿಸಿ 2.50 ರೂ.ಗೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ ನಂತರ ಕೇಂದ್ರ ಇದೀಗ ಜಾಗತಿಕ ಮಟ್ಟದಲ್ಲಿ ಕುಸಿಯುತ್ತಿರುವ ರೂಪಾಯಿ ಮೌಲ್ಯ ಹಿಡಿದೆತ್ತಲು ಕ್ರಮಕ್ಕೆ ಮುಂದಾಗಿದೆ.
ಇದನ್ನು ಸ್ವತಃ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದು, ರೂಪಾಯಿ ಮೌಲ್ಯ ಕುಸಿತ ತಡೆಗಟ್ಟಲು ಕ್ರಮ ಕೈಗೊಳ್ಳುತ್ತಿರುವಾಗ ಹೇಳಿದ್ದಾರೆ. ಸದ್ಯದಲ್ಲೇ ರೂಪಾಯಿ ಮೌಲ್ಯ ಏರಿಕೆ ಮಾಡುವ ಕ್ರಮವೊಂದು ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ರೂಪಾಯಿ ಮೌಲ್ಯ ದಾಖಲೆ ಪ್ರಮಾಣದಲ್ಲಿ ಕುಸಿದಿರುವುದರ ಬಗ್ಗೆ ವಿಪಕ್ಷಗಳು ಕೇಂದ್ರವನ್ನು ಟೀಕಿಸುತ್ತಲೇ ಇವೆ. ಹೀಗಾಗಿ ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವ ಅನಿವಾರ್ಯತೆ ಕೇಂದ್ರಕ್ಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.