ಕೊನೆಗೂ ಇಳಿಕೆಯಾಯಿತು ಪೆಟ್ರೋಲ್-ಡೀಸೆಲ್ ಬೆಲೆ
ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ ಅಬಕಾರಿ ಸುಂಕವನ್ನು ಲೀಟರ್ ಮೇಲೆ 1.50 ರೂ. ಇಳಿಸಿದ್ದು, ತೈಲ ಕಂಪನಿಗಳಿಗೆ ಪಾವತಿಯಾಗುವ ಮೊತ್ತದಲ್ಲಿ 1 ರೂ. ಕಡಿತ ಮಾಡಿರುವುದಾಗಿ ಘೋಷಿಸಿದ್ದಾರೆ.
ಹೊಸ ದರ ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಯಾಗಿದೆ. ಬಿಜೆಪಿ ಆಡಳಿತವಿರುವ ದೇಶದ ಒಟ್ಟು 11 ರಾಜ್ಯಗಳಲ್ಲಿ 5 ರೂ. ನಷ್ಟು ಇಳಿಕೆಯಾಗಿದೆ. ಕೇಂದ್ರ ಸರ್ಕಾರ ತೈಲ ಬೆಲೆ ಇಳಿಕೆ ಘೋಷಣೆ ಮಾಡುತ್ತಿದ್ದಂತೆ ಈ ರಾಜ್ಯಗಳೂ 2.50 ರೂ. ಇಳಿಕೆ ಮಾಡಿದೆ. ಆದರೆ ಕರ್ನಾಟಕದಲ್ಲಿ ಇಲ್ಲ.