ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಸಿನಿಮಾ ನಟರ ವಿರುದ್ಧ ಶ್ರೀರಾಮಸೇನೆ ಆರೋಪ ಮಾಡಿದಾದರೂ ಯಾಕೆ?

ಗುರುವಾರ, 10 ಮೇ 2018 (14:23 IST)
ಧಾರವಾಡ : ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಿನಿಮಾ ನಟರಾದ ಸುದೀಪ್, ದರ್ಶನ್, ಯಶ್ ಅವರು ತಮ್ಮ ಆತ್ಮೀಯ ರಾಜಕಾರಣಿಗಳ ಪರವಾಗಿ ಮತಯಾಚಿಸಿದ್ದು, ಈ ಬಗ್ಗೆ ಶ್ರೀರಾಮಸೇನೆ ಸಂಘಟನೆ ‘ಹಣ ಪಡೆದು ಕೆಲವು ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಇಳಿದಿದ್ದಾರೆ ‘ ಎಂದು ನಟರ ವಿರುದ್ಧ ಆರೋಪ ಮಾಡಿದ್ದಾರೆ.


ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶ್ರೀರಾಮಸೇನೆ ಸಂಘಟನೆಯ ಸಂಚಾಲಕ ಮಂಜುನಾಥ ಕವಳಿ ಅವರು,’ ನಟರು ರಾಜಕಾರಣಕ್ಕೆ ಬರುವುದರಲ್ಲಿ ನಮ್ಮ ಆಕ್ಷೇಪವೇನೂ ಇಲ್ಲ. ನಟರಾದ ಅಂಬರೀಶ್ ಹಾಗೂ ಜಗ್ಗೇಶ್ ಅವರಂತೆ ಒಂದೇ ಪಕ್ಷದಲ್ಲಿರಲಿ. ಒಂದು ಪಕ್ಷದಲ್ಲಿ ಗುರುತಿಸಿಕೊಂಡು ರಾಜಕಾರಣ ನಡೆಸಲಿ. ಅದನ್ನು ಬಿಟ್ಟು ಬೆಳಿಗ್ಗೆ ಒಂದು ಪಕ್ಷದ ಅಭ್ಯರ್ಥಿ, ಸಂಜೆ ಮತ್ತೊಂದು ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ’ ಎಂದು ಕಿಡಿಕಾರಿದ್ದಾರೆ.
ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಅನೇಕ ಮಂದಿ ಹೋರಾಟಗಾರರು, ಪ್ರಾಮಾಣಿಕ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಅವರ ಪರವಾಗಿ ಈ ನಟರು ಪ್ರಚಾರ ನಡೆಸಲಿ. ಸ್ನೇಹಿತರ ಪರವಾಗಿ ಪ್ರಚಾರ ನಡೆಸುತ್ತೇವೆ ಎಂದು ಹೇಳುತ್ತಾ ಗಂಟೆಗೊಬ್ಬರು ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ್ದಾರೆ. ಹಣ ಪಡೆದು ಕೆಲವು ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ