ನಾನು ಸಿಎಂ ಆಕಾಂಕ್ಷಿಯಲ್ಲ ಅಂತ ಪ್ರಭಾವಿ ಸಚಿವ ಹೇಳಿದ್ದೇಕೆ?

ಗುರುವಾರ, 6 ಡಿಸೆಂಬರ್ 2018 (16:19 IST)
ನಾನು ಸಮ್ಮಿಶ್ರ ಸರ್ಕಾರದ ಆಶಯಕ್ಕೆ ಧಕ್ಕೆ ತಂದಿಲ್ಲ. ನಾನು ಸಿಎಂ ಆಕಾಂಕ್ಷಿಯಲ್ಲ ಅಂತ ಪ್ರಭಾವಿ ಸಚಿವರು ಹೇಳಿಕೆ ನೀಡಿದ್ದಾರೆ.

ನನ್ನ ಕಡೆಯಿಂದ ಕಾಂಗ್ರೆಸ್ ನವರಿಗೆ ತೊಂದರೆ ಆಗಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಸೇರಿ ಯಾವುದೇ ನಾಯಕರು ಕೇಳಿದರೆ ಉತ್ತರ ಕೊಡಲು ಸಿದ್ಧನಾಗಿದ್ದೇನೆ. ನಾನು ಸಮ್ಮಿಶ್ರ ಸರ್ಕಾರದ ಆಶಯಕ್ಕೆ ಧಕ್ಕೆ ತಂದಿಲ್ಲ. ವರ್ಗಾವಣೆ ಸೇರಿ ಯಾವುದೇ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ. ಬೇಕಿದ್ದರೆ ಸಮನ್ವಯ ಸಮಿತಿ ಸಭೆಯಲ್ಲೇ ವಿವರಿಸಿ ಹೇಳುವೆ. ಹೀಗಂತ ಹಾಸನದಲ್ಲಿ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.

ಬದುಕಿರುವವರೆಗೂ ನಾನು ಕುಮಾರಸ್ವಾಮಿ ಹೊಡೆದಾಡಲ್ಲ. ಸೋದರರು ಕಚ್ಚಾಡುತ್ತಾರೆ ಎಂದುಕೊಂಡಿದ್ರೆ ಅದು ಭ್ರಮೆ. ನಾನು ಸಿಎಂ ಆಕಾಂಕ್ಷಿಯಲ್ಲ ಎಂದು ಸ್ಪಷ್ಟನೆ ನೀಡಿದರು.  
ಮಾಜಿ ಸಚಿವ ಕಾಂಗ್ರೆಸ್ ನ ಬಿ.ಶಿವರಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೇವಣ್ಣ, ಹಾಸನಕ್ಕೆ ಕಾಂಗ್ರೆಸ್ ಅವಧಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳ ಆದೇಶದ ಪ್ರತಿ ತೋರಿಸಲಿ. ನಾನು‌ ಕೇಂದ್ರದ ಜೊತೆ ಕಳೆದ 4 ವರ್ಷದಿಂದ ಪ್ರಯತ್ನ ಮಾಡಿ ತಂದಿರುವ ಯೋಜನೆಯಿದೆ. ಹೆದ್ದಾರಿ ಯೋಜನೆಗಳಿಗೆ  ರಾಜ್ಯ ಸರಕಾರ 10 ರೂ. ಕೊಡಲ್ಲ. ವಿಷಯ ಗೊತ್ತಿದ್ದರೆ ಮಾತಾಡಲಿ ಎಂದು ಶಿವರಾಂಗೆ ಟಾಂಗ್ ನೀಡಿದರು.

ಬಿ.ಎಸ್.ಯಡಿಯೂರಪ್ಪ ತಮ್ಮ ಅವಧಿಯಲ್ಲಿ ಹಾಸನಕ್ಕೆ ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂದು ಪ್ರಶ್ನೆ ಮಾಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ