ಗ್ರಾಮ ದೇವಸ್ಥಾನದ ಕಟ್ಟೆಯ ಮೇಲೆ ಸಚಿವ ಕುಳಿತದ್ಯಾಕೆ?

ಶುಕ್ರವಾರ, 28 ಡಿಸೆಂಬರ್ 2018 (15:40 IST)
ಹಾರವಿಲ್ಲ ತುರಾಯಿ ಇಲ್ಲ. ಅತೀ ಸರಳ ರೀತಿಯಲ್ಲಿ ಗ್ರಾಮದ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತ ಸಚಿವರು ಗ್ರಾಮಸ್ಥರ ಗಮನ ಸೆಳೆದರು.

ಗ್ರಾಮದ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತ ಕುಂದುಕೊರತೆಗಳನ್ನು ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಲಿಸಿದರು.

ಕಲಬುರಗಿ ಜಿಲ್ಲೆಯ ಚಿತ್ತಾಪುರ ಮತಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ, ಗ್ರಾಮಸ್ಥರಿಗೆ ಯಾವುದೇ ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳಲು ದೊಡ್ಡ ಪೆಂಡಾಲಾಗಲಿ, ರಂಗು ರಂಗಿನ ಶಾಲುಗಳಾಗಲಿ, ಊಡುಗರೆಗಳಾಗಲಿ ನೀಡದಂತೆ ನಿಷೇಧಿಸಿದರು. ಪ್ರಿಯಾಂಕ್ ಖರ್ಗೆ ಅವರು ತಾವು ಸಚಿವರೆನ್ನುವುದನ್ನು ತಿಳಿಯದೇ ಗ್ರಾಮಗಳಲ್ಲಿ ಸಾರ್ವಜನಿಕರೊಂದಿಗೆ ಅವರ ಪ್ರತಿನಿಧಿಯಂತೆ ಗ್ರಾಮದ ಸಮಸ್ಯೆಗಳನ್ನು ತಿಳಿದು ಪರಿಹರಿಸಿದರು.

ನಾನು ನನ್ನ ಮತಕ್ಷೇತ್ರದ ಗ್ರಾಮಗಳಿಗೆ ಆಗಮಿಸಿದಾಗ ಅನಾವಶ್ಯಕವಾಗಿ ಗ್ರಾಮಸ್ಥರನ್ನು ಸಂಬೋಧಿಸಿ ಮಾತನಾಡುವುದಿಲ್ಲ. ಅವಶ್ಯಕತೆಯಿದ್ದಾಗ ಮಾತ್ರ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಏನಿದ್ದರೂ ಗ್ರಾಮದಲ್ಲಿ ಸುತ್ತಾಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವಲ್ಲಿ ತೊಡಗಲಾಗುವುದು. ಗ್ರಾಮಸ್ಥರು ರಾಜಕೀಯ ಮಾಡದೇ ತಮ್ಮ ಗ್ರಾಮದ ಅಭಿವೃದ್ಧಿಗಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ವೈಯಕ್ತಿಕ ವೈಮನಸ್ಸುಗಳನ್ನು ಬೆಳೆಸಿಕೊಳ್ಳಬಾರದು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ