ಮಕ್ಕಳಿಗೆ ನೀಡಬೇಕಾದದ್ದು ಗುಂಡಿ ತೆಗೆದು ಹೂತಿಟ್ಟಿದ್ದು ಏಕೆ?

ಗುರುವಾರ, 27 ಡಿಸೆಂಬರ್ 2018 (15:35 IST)
ಶಾಲೆಯಲ್ಲಿ ಮಕ್ಕಳಿಗೆ ನೀಡಬೇಕಾದದ್ದನ್ನು ಮಣ್ಣಿನಲ್ಲಿ ಗುಂಡಿ ತೆಗೆದು ಹೂತಿಟ್ಟಿರುವ ವಿಷಯ ಬೆಳಕಿಗೆ ಬಂದಿದೆ.
ಹಾಲಿನ ಪುಡಿ ಮಣ್ಣಲ್ಲಿ ಹೂತಿಟ್ಟಿರುವ ಘಟನೆ ನಡೆದಿದೆ.

ಶಾಲೆಯಲ್ಲಿ ಮಕ್ಕಳಿಗೆ  ನೀಡುವ ಹಾಲಿನ ಪುಡಿಯನ್ನು ಗುಂಡಿ ತೆಗೆದು ಹೂತಿಟ್ಟಿದ್ದು, ಬೆಳಕಿಗೆ ಬಂದಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗುರ ತಾಲ್ಲೂಕಿನ  ಯರಡೋಣ ಪ್ರೌಢ ಶಾಲೆ ಆವರಣದಲ್ಲಿ ಘಟನೆ ನಡೆದಿದೆ.  ಸರಕಾರದಿಂದ ಶಾಲಾ ಮಕ್ಕಳಿಗೆ ಬರುವ ದಾಸ್ತಾನುಗಳನ್ನು ಚೀಲದಲ್ಲಿ ತುಂಬಿ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಜನರು ವ್ಯಂಗ್ಯವಾಡುತ್ತಿದ್ದಾರೆ.

ಮಕ್ಕಳಿಗೆ  ನೀಡುವ ಹಾಲಿನ ಪುಡಿ ಮತ್ತು ಇನ್ನಿತರ ದಾಸ್ತಾನು ನೆಲದಲ್ಲಿ ಹೂತು ಇಡಲಾಗಿದೆ. 290 ಮಕ್ಕಳಿಗೆ ಹಾಲು  ನೀಡದೆ  ಹಾಲಿನ ಪುಡಿ ಗುಂಡಿಯಲ್ಲಿ ಸರ್ವನಾಶವಾಗಿದೆ. ಶಾಲಾ ಆವರಣದಲ್ಲಿ ದುರ್ನಾತ ಬೀರುತ್ತಿದ್ದನ್ನು ಗ್ರಾಮಸ್ಥರು ಪತ್ತೆ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಶಾಲಾ ಪ್ರಾಂಶುಪಾಲರ ಬೇಜವಬ್ದಾರಿ ವರ್ತನೆಗೆ ಗ್ರಾಮಸ್ಥರು, ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ